Latestಕ್ರೈಂವೈರಲ್ ನ್ಯೂಸ್

ಪತ್ನಿಯ ಮಾಂಗಲ್ಯ ಸರ ಕದ್ದು ಓಡಿದವರನ್ನು ಬೆನ್ನಟ್ಟಿದ ಪತಿಯನ್ನು ಕಲ್ಲಿನಿಂದ ಜಜ್ಜಿದ ಕ್ರೂರಿಗಳು..! ಪ್ರಕರಣ ದಾಖಲು..!

627

ನ್ಯೂಸ್ ನಾಟೌಟ್: ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಕದ್ದು, ಪತಿಗೆ ಕಲ್ಲಿನಿಂದ ಜಜ್ಜಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.

ಪತ್ನಿಯ ಸರ ಕದ್ದವರನ್ನು ಬೆನ್ನಟ್ಟುತ್ತಿರುವಾಗ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಕಲ್ಲಿನಿಂದ ತಲೆಯನ್ನು ಜಜ್ಜಿ ಪರಾರಿಯಾಗಿದ್ದಾರೆ.

ಹೇಮಂತ್ ಗವಾಂಡೆ ತನ್ನ ಪತ್ನಿಯೊಂದಿಗೆ ರೈಲ್ವೆ ನಿಲ್ದಾಣದಲ್ಲಿದ್ದಾಗ ಕೆಲವು ದುಷ್ಕರ್ಮಿಗಳು ಮಹಿಳೆಯ ಮಂಗಳಸೂತ್ರವನ್ನು ಕಸಿದುಕೊಂಡು ಪರಾರಿಯಾಗಲು ಪ್ರಯತ್ನಿಸಿದರು. ಗವಾಂಡೆ ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮುಖ ಹಾಗೂ ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾರೆ.

ಸ್ಥಳೀಯರು ಅವರನ್ನು ಅಕೋಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಲು ಸ್ಥಳೀಯ ಅಪರಾಧ ಶಾಖೆ (ಎಲ್‌ಸಿಎಸ್) ಮತ್ತು ವಿಶೇಷ ದಳದಿಂದ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಮನೋಜ್ ಬಹುರೆ ತಿಳಿಸಿದ್ದಾರೆ.

ಇದನ್ನೂ ಓದಿ:ದೈವದ ವೇಷ ಹಾಕಿ ವೇದಿಕೆ ಮೇಲೆ ಯುವಕನ ಹುಚ್ಚಾಟ..! ತುಳುನಾಡಿನ ದೈವಾರಾಧನೆಗೆ ಪದೇ-ಪದೇ ಅಪಮಾನ..! ವಿಡಿಯೋ ವೈರಲ್

See also  ದರ್ಶನ್ ​ಗೆ ಅಭಿಮಾನಿಗಳಿಂದ ಸಮಸ್ಯೆ, ನಟನ ಮನೆ ಮುಂದೆ ಹೈಡ್ರಾಮ..! ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget