Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಾದಕ ವಸ್ತು​ ಸೇವನೆಗಾಗಿ 1 ಕೋಟಿ ರೂ. ಮೌಲ್ಯದ ಆಸ್ತಿಯನ್ನೇ ಮಾರಿದ ಆಸ್ಪತ್ರೆಯೊಂದರ ಮಾಜಿ CEO..! ಮಹಿಳೆ ಅರೆಸ್ಟ್..!

701

ನ್ಯೂಸ್‌ ನಾಟೌಟ್‌: ಮಾದಕ ವಸ್ತುವಾದ ಕೊಕೇನ್​ ಸೇವನೆಗಾಗಿ ಹೈದರಾಬಾದ್‌ ನ ಒಮೆಗಾ ಆಸ್ಪತ್ರೆಯ ಮಾಜಿ ಮಹಿಳಾ ಸಿಇಒ ಬರೋಬ್ಬರಿ 1 ಕೋಟಿ ರೂಪಾಯಿ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಹೈದರಾಬಾದ್‌ ನ ಪ್ರತಿಷ್ಠಿತ ಒಮೆಗಾ ಆಸ್ಪತ್ರೆಗಳ ಮಾಜಿ ಸಿಇಒ ಡಾ. ನಮ್ರತಾ ಚಿಗುರುಪತಿ (34) ಅವರನ್ನು ಸದ್ಯ ತೆಲಂಗಾಣ ಮಾದಕ ದ್ರವ್ಯ ವಿರೋಧಿ ಬ್ಯೂರೋ (ಟಿಜಿಎಎನ್​ಬಿ) ಬಂಧಿಸಿದ್ದಾರೆ. ಜೊತೆಗೆ ಕೊಕೇನ್ ಸರಬರಾಜುದಾರ ವಂಶ್ ಧಕ್ಕರ್ ​ನನ್ನು ಅರೆಸ್ಟ್ ಮಾಡಲಾಗಿದೆ. ಇನ್ನೊಬ್ಬ ಕೊಕೇನ್ ಸರಬರಾಜುದಾರ ಕಿಂಗ್ ಪಿನ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಡಾ. ನಮ್ರತಾ ಚಿಗುರುಪತಿ ಸ್ಪೇನ್ ​ನಲ್ಲಿ 2021, 2022ರಲ್ಲಿ ಎಂಬಿಎ ವ್ಯಾಸಂಗ ಮಾಡುವಾಗ ಮಾದಕ ವ್ಯಸನಕ್ಕೆ ಒಳಗಾಗಿದ್ದರು. ಅಂದಿನಿಂದ ಕೊಕೇನ್ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಕಳೆದ ವಾರ ತನ್ನ ಕಾರಿನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಕೊಕೇನ್​ ಖರೀದಿ ಮಾಡುವಾಗ ಪೊಲೀಸರು ಅರೆಸ್ಟ್ ಮಾಡಿದ್ದರು. ಇಲ್ಲೊಂದು ಸಂಗತಿ ಎಂದರೆ ಕೊಕೇನ್ ಅನ್ನು ವಾಟ್ಸ್ ​​ಅಪ್​ ಮೂಲಕ ಆರ್ಡರ್​ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮಾದಕ ವಸ್ತುವಿಗೆ ಒಳಗಾದ ಮೇಲೆ ಡಾ. ನಮ್ರತಾ ಸುಮಾರು 1 ಕೋಟಿ ಮೌಲ್ಯದ ತನ್ನ ಆಸ್ತಿಯನ್ನು ಮಾರಾಟ ಮಾಡಿದ್ದರು. ಇದೇ ಹಣದಿಂದ ಕೊಕೇನ್ ಅನ್ನು ವಾಟ್ಸ್ ​ಅಪ್​ ಮೂಲಕ ಆರ್ಡರ್ ಮಾಡುತ್ತಿದ್ದರು. ಒಂದು ದಿನದಲ್ಲಿ ಸುಮಾರು 10 ಬಾರಿ ಕೊಕೇನ್ ಸೇವನೆ ಮಾಡುತ್ತಿದ್ದರು. ಮಲಗಿದಾಗ 2-3 ಗಂಟೆಗೊಮ್ಮೆ ಎಚ್ಚರಗೊಳ್ಳುತ್ತಿದ್ದಳು. ನಿದ್ದೆ ಬಾರದಿದ್ದಾಗ ನಿದ್ದೆಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಕೊಡಲಿಯಿಂದ ಪತ್ನಿಯ ತಲೆ ಕತ್ತರಿಸಿ ನದಿಗೆಸೆದ ಪತಿ..! ದೇಹವನ್ನು ಮನೆಯಲ್ಲೇ ಹೂತು ಹಾಕಿದ್ದ ಕ್ರೂರಿ..!

ಭಾರತದ ದಾಳಿ ಬಳಿಕ ಪಾಕ್‌ ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ರಹಸ್ಯ ಮಾಹಿತಿ ಬಯಲು..!

See also  ಜೈಲಿನೊಳಗೆ ದರ್ಶನ್ ನ ಬಿಂದಾಸ್ ಲೈಫ್ ನ ವಿಡಿಯೋ, ಫೋಟೋ ವೈರಲ್ ಬೆನ್ನಲ್ಲೇ ಅಧಿಕಾರಿಗಳಿಗೆ ಶಾಕ್..! 7 ಮಂದಿಯನ್ನು ಅಮಾನತ್ತು ಮಾಡಿದ್ದೇವೆ ಎಂದ ಗೃಹ ಸಚಿವ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget