Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಗರ್ಭಿಣಿ ಪತ್ನಿಗೆ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಭೀಕರ ಹಲ್ಲೆ..! ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

917

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಗರ್ಭಿಣಿ ಪತ್ನಿಗೆ ಕಲ್ಲಿನಿಂದ ಜಜ್ಜಿ ಹಲ್ಲೆ ನಡೆಸಿರುವ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈದರಾಬಾದ್ ​ನಲ್ಲಿ ನಡೆದ ಘಟನೆ ಇದಾಗಿದ್ದು, ಈ ಆಘಾತಕಾರಿ ಘಟನೆ ಏಪ್ರಿಲ್ 1 ರ ರಾತ್ರಿ ಸೈಬರಾಬಾದ್ ಪೊಲೀಸ್ ಕಮಿಷನರೇಟ್‌ ನ ಗಚಿಬೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಪತ್ನಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ನಂತರ ಆರೋಪಿ ಗಂಡ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಈ ಭೀಕರ ಹಲ್ಲೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪತಿ ಮತ್ತು ಆತನ ಪತ್ನಿಯ ನಡುವೆ ನಡೆದ ವಾಗ್ವಾದದ ನಂತರ, ಆತ ದೊಡ್ಡ ಕಲ್ಲನ್ನು ಎತ್ತಿಕೊಂಡು ಆಕೆಗೆ ಪದೇ ಪದೇ ಹೊಡೆಸಿದ್ದಾನೆ. ಬಳಿಕ ಸತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ದಾರಿ ಹೋಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ (NIMS) ಗೆ ಸ್ಥಳಾಂತರಿಸಲಾಯಿತು. ತಲೆಗೆ ಗಂಭೀರವಾದ ಗಾಯಗಳಾಗಿದ್ದರಿಂದ ಅವರು ಕೋಮಾಕ್ಕೆ ಜಾರಿದ್ದಾರೆ ಎನ್ನಲಾಗಿದೆ. ಪೊಲೀಸರ ಪ್ರಕಾರ, ಮೊಹಮ್ಮದ್ ಬಸ್ರತ್ ಅವರು ಅಕ್ಟೋಬರ್ 2024 ರಲ್ಲಿ ಕೋಲ್ಕತ್ತಾದ ಶಬಾನಾ ಪರ್ವೀನ್ ಅವರನ್ನು ಪ್ರೇಮ ವಿವಾಹವಾಗಿದ್ದರು. ಈ ದಂಪತಿಗಳು ಹಫೀಜ್‌ಪೇಟೆಯ ಆದಿತ್ಯನಗರದಲ್ಲಿ ವಾಸಿಸುತ್ತಿದ್ದರು.

ಗರ್ಬಿಣಿ ಪತ್ನಿ ಆಸ್ಪತ್ರೆಯಿಂದ ಹೊರಬಂದ ನಂತರ, ಅವರು ಯಾವುದೋ ವಿಷಯಕ್ಕೆ ಜಗಳವಾಡಿದರು. ಬಸ್ರತ್ ಶಬಾನಾಳ ಎಂಬಾಕೆಯನ್ನು ಒದೆಯುತ್ತಿರುವುದು ಕಂಡುಬಂದಿತು, ಮತ್ತು ಅವಳು ನೆಲಕ್ಕೆ ಕುಸಿದ ನಂತರ, ಪಕ್ಕದಲ್ಲಿದ್ದ ಕಲ್ಲು ಎತ್ತಿಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಗಚಿಬೌಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡರು. ಬಸ್ರತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಬೆಲೆ ಏರಿಕೆಗಳ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ತಯಾರಿ..! ಮಂಗಳೂರು, ಉಡುಪಿ ಜನರಿಗೆ ಮತ್ತೊಂದು ಶಾಕ್..!

ಬೆಟ್ಟಿಂಗ್ ಆಪ್ ಅನ್ನು ಪ್ರಚಾರ ಮಾಡಿದ್ದಕ್ಕೆ ಸೋನು ಗೌಡ ಸೇರಿ 100ಕ್ಕೂ ಹೆಚ್ಚು ಮಂದಿಯ ವಿಚಾರಣೆ..! ಕ್ಷಮೆ ಕೇಳಿದ ರೀಲ್ಸ್ ಸ್ಟಾರ್‌ ಗಳು..!

  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget