Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪತ್ನಿ ಮತ್ತು ಪುತ್ರನ ಮೇಲೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ..! ಕಾರಿನೊಳಗೆ ಮೂವರ ಮೃತದೇಹ ಪತ್ತೆ..!

814

ನ್ಯೂಸ್ ನಾಟೌಟ್: ರಿಯಲ್ ಎಸ್ಟೇಟ್ ಉದ್ಯಮಿ ಪತ್ನಿ, ಮಗನ ಮೇಲೆ ಗುಂಡು ಹಾರಿಸಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‌ನ ಪಟಿಯಾಲ ಜಿಲ್ಲೆಯಲ್ಲಿ ಜೂ.22ರಂದು ನಡೆದಿದೆ.

ಮೊಹಾಲಿಯ ಸೆಕ್ಟರ್ 109 ರ ರಿಯಲ್ ಎಸ್ಟೇಟ್ ಉದ್ಯಮಿ ಸಂದೀಪ್ ಸಿಂಗ್ ರಾಜ್‌ಪಾಲ್, ಅವರ ಪತ್ನಿ ಮಂದೀಪ್ ಕೌರ್ (42) ಮತ್ತು ಅವರ 15 ವರ್ಷದ ಮಗ ಅಭಯ್ ಸಿಂಗ್ ಮೃತರು ಎಂದು ಗುರುತಿಸಲಾಗಿದೆ.

ರಾಜ್‌ ಪಾಲ್ ತನ್ನ ಪತ್ನಿ ಮತ್ತು ಮಗನನ್ನು ಟೊಯೋಟಾ ಫಾರ್ಚೂನರ್‌ ನಲ್ಲಿ ಗುಂಡು ಹಾರಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದಾರೆ.

ಸಂದೀಪ್‌ ಮೃತದೇಹ ಚಾಲಕನ ಸೀಟಿನಲ್ಲಿ, ಅವರ ಪತ್ನಿ ಮುಂಭಾಗದ ಸೀಟಿನಲ್ಲಿ ಅವರ ಮಗ ಹಿಂದಿನ ಸೀಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತೆಪ್ಲಾ ಬಾನೂರಿನ ರಾಷ್ಟ್ರೀಯ ಹೆದ್ದಾರಿಯ ನಿರ್ಜನ ಹಳ್ಳಿಯ ರಸ್ತೆಯಲ್ಲಿ ಕಾರು ನಿಲ್ಲಿಸಲಾಗಿತ್ತು. ಇದನ್ನು ನೋಡಿದ ಕೃಷಿ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ದಂಪತಿಯ ಪುತ್ರ ಅಭಯ್ ಸಿಂಗ್ ಕೆಲ ಸಮಯದಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

75 ಕೋಟಿ ರೂ. ಸಂಬಳ ತೊರೆದು ಸನ್ಯಾಸಿಯಾದ ರಿಲಯನ್ಸ್ ಉಪಾಧ್ಯಕ್ಷ..! ಜೈನ ಸಂಪ್ರದಾಯದಂತೆ ದೀಕ್ಷೆ..!

ರಾತ್ರಿ ಗ್ರಾಮಸ್ಥರಿಗೆ ಮಹಿಳೆ ಜೊತೆ ಸಿಕ್ಕಿಬಿದ್ದ ಪ್ರಖ್ಯಾತ ಸ್ವಾಮೀಜಿ..! ಮಠ ಬಿಟ್ಟು ಸ್ವಾಮೀಜಿ ಪರಾರಿ..!

ಶೀಘ್ರದಲ್ಲೇ 8,000 ಪೊಲೀಸ್ ಪೇದೆ ಹುದ್ದೆಗಳ ಭರ್ತಿಗೆ ತಯಾರಿ, ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ

See also  ಸುಬ್ರಹ್ಮಣ್ಯ: ಕುಮಾರಾಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget