ಕ್ರೈಂವೈರಲ್ ನ್ಯೂಸ್

ಹಾಡಹಗಲೇ ಮಚ್ಚಿನಿಂದ ಯುವತಿಯನ್ನು ಕೊಂದ ಕಾಲ್ ​ಸೆಂಟರ್ ಉದ್ಯೋಗಿ..! ಪೊಲೀಸರು ಈ ಬಗ್ಗೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮಹಾರಾಷ್ಟ್ರದ ಪುಣೆಯ ಕಾಲ್ ಸೆಂಟರ್ ಸಿಬ್ಬಂದಿಯನ್ನು ಆಕೆಯ ಸಹೋದ್ಯೋಗಿಯೇ ಕೊಲೆ ಮಾಡಿದ್ದಾನೆ. ಪುಣೆಯ ಬಿಪಿಒ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಮಹಿಳೆ ತನ್ನ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಸಹೋದ್ಯೋಗಿ ನಡೆಸಿದ ಮಚ್ಚಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಆಕೆಯ ಕೈಗೆ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಯುವತಿ ಸಾವನ್ನಪ್ಪಿದ್ದಾರೆ.

ಈ ಘಟನೆ ನಿನ್ನೆ(ಜ.9) ಸಂಜೆ 6.15ಕ್ಕೆ ಮಹಾರಾಷ್ಟ್ರದ ಯೆರವಡಾದ ಬಿಪಿಒ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದೆ. ಮೃತ ಯುವತಿಯನ್ನು ಕತ್ರಜ್ ಎಂಬಲ್ಲಿನ ನಿವಾಸಿ 28 ವರ್ಷದ ಶುಭದಾ ಶಂಕರ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದಾತ ಶಿವಾಜಿನಗರ ನಿವಾಸಿ 30 ವರ್ಷದ ಕೃಷ್ಣ ಸತ್ಯನಾರಾಯಣ್ ಕನೋಜ ಎಂದು ಗುರುತಿಸಲಾಗಿದೆ. ಶಂಕಿತನನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮೃತ ಯುವತಿಗೆ ಸ್ವಲ್ಪ ಹಣವನ್ನು ನೀಡಿದ್ದ. ಆಕೆ ಅದನ್ನು ವಾಪಾಸ್ ಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.” ಎಂದು ಪೊಲೀಸರು ತಿಳಿಸಿದ್ದಾರೆ.

Click

Related posts

‘ಬಿಗ್ ಬಾಸ್’ ಮನೆಯೊಳಗೆ ಘರ್ಜಿಸುತ್ತಿರುವ ಜಗದೀಶ್ ʼನಕಲಿ ಲಾಯರ್ʼ..? ಲಾ ಡಿಗ್ರಿ ಕ್ಯಾನ್ಸಲ್ ಮಾಡಿದ ದೆಹಲಿ ಬಾರ್ ಕೌನ್ಸಿಲ್‌..!

ಮತ್ತೆ ಡಿಕೆಶಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ..! ಬಿಜೆಪಿ ನಾಯಕರ ಅಸಮಾಧಾನಕ್ಕೆ ಮತ್ತೆ ಗುರಿಯಾದರೆ ಬೊಮ್ಮಾಯಿ? ಅಷ್ಟಕ್ಕೂ ಬೊಮ್ಮಾಯಿ ಹೇಳಿದ್ದೇನು?

ಕೆಲಸ ಬಿಟ್ಟರೆ 4 ಲಕ್ಷ ರೂ. ಕೊಡ್ತೀವಿ ಎಂದದ್ದೇಕೆ ಅಮೆಜಾನ್..?ಏನಿದು ಉದ್ಯೋಗಿಗಳಿಗೆ ವಿಚಿತ್ರ ಆಫರ್‌ ?