ಕ್ರೈಂದೇಶ-ವಿದೇಶ

ಗೆಳತಿಯನ್ನ ಕೊಂದು ಇಡೀ ಮನೆಗೆ ಬೆಂಕಿ ಇಟ್ಟು ನಾಟಕವಾಡಿದ್ದ ಉದ್ಯಮಿ ಅರೆಸ್ಟ್..! 6 ವರ್ಷಗಳಿಂದ ‘ಲಿವ್‌-ಇನ್‌ ರಿಲೇಷನ್‌ ಶಿಪ್‌’ ನಲ್ಲಿ ಇದ್ದ ಆಕೆಯ ದುರಂತ ಅಂತ್ಯ..!

179

ನ್ಯೂಸ್ ನಾಟೌಟ್: ವಿವಾಹಿತ ಉದ್ಯಮಿಯೊಬ್ಬ ತನ್ನ ‘ಲಿವ್‌-ಇನ್‌ ರಿಲೇಷನ್ ಶಿಪ್’ ನಲ್ಲಿದ್ದ ಗೆಳತಿಯನ್ನು ಚಾಕುವಿನಿಂದ ಇರಿದು ಕೊಂದು, ದೇಹವನ್ನು ಸುಟ್ಟುಹಾಕಿರುವ ಘಟನೆ ಹರಿಯಾಣದ ಸೋನಿಪತ್‌ ನಲ್ಲಿ ನಡೆದಿದೆ.

ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಕೊಲೆಯಾದ ಮಹಿಳೆಯನ್ನು ಸರಿತಾ ಹಾಗೂ ಕೊಲೆ ಮಾಡಿದ ಆರೋಪಿಯನ್ನ ಸಿವಿಲ್ ಲೈನ್ಸ್ ಪ್ರದೇಶದ ರಿಷಿ ಉಪಕಾರ್ ಎಂದು ಗುರುತಿಸಲಾಗಿದೆ. ಪಂಜಾಬ್‌ನ ಜಿರಾಕ್‌ಪುರ ನಿವಾಸಿಯಾಗಿರುವ ಸರಿತಾ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಳು. ಈಕೆ ಪತಿಯಿಂದ ಬೇರ್ಪಟ್ಟು 6 ವರ್ಷಗಳಿಂದ ಉದ್ಯಮಿಯೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ.

ಅಲ್ಲದೇ ಉಪಕಾರ್‌ ಲಿವಿ-ಇನ್‌ ಸಂಬಂಧ (live In Relationship) ಬಗ್ಗೆ ಆತನ ಪತ್ನಿಗೆ ತಿಳಿದಿತ್ತು. ಸರಿತಾ ಕೂಡ 2004ರಲ್ಲೇ ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ಇಬ್ಬರೂ ಕಳೆದ 6 ವರ್ಷಗಳಿಂದ ಲಿವ್‌-ಇನ್‌ ರಿಲೇಷನ್‌ ಶಿಪ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಅಕ್ಟೋಬರ್‌ 25ರಂದು ಸರಿತಾಳನ್ನ ಕೊಂದಿರುವ ಉಪಕಾರ್‌ ಆಕೆಯ ದೇಹದೊಂದಿಗೆ ಇಡೀ ಮನೆಯನ್ನೇ ಸುಟ್ಟುಹಾಕಿದ್ದಾನೆ. ನಂತರ ಇದೊಂದು ಆಕಸ್ಮಿಕ ಬೆಂಕಿ ಅವಘಡ ಎನ್ನುವಂತೆ ಬಿಂಬಿಸಿದ್ದಾನೆ. ಆದ್ರೆ ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷೆ ಬಳಿಕ ಸುಟ್ಟ ಗಾಯಕ್ಕೂ ಮುನ್ನ ಚೂರಿ ಇರಿದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉಪಕಾರ್‌ ನನ್ನ ಬಂಧಿಸಲಾಗಿದೆ. ಸದ್ಯ ನ್ಯಾಯಾಲಯವು 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Click

https://newsnotout.com/2024/11/ipl-kannada-news-rishab-panth-kannada-news-viral-issue-ipl-bidding/
See also  ಚಿರತೆಯ ಬಾಲ ಹಿಡಿದು ಬಲೆಗೆ ಎಸೆದ ಯುವಕ..! ಯುವಕನ ಧೈರ್ಯ ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಕ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget