ಕ್ರೈಂರಾಜಕೀಯವೈರಲ್ ನ್ಯೂಸ್

ರಸ್ತೆ ತಡೆದು ಪ್ರತಿಭಟಿಸುತ್ತಿದ್ದ ರೈತರ ಮಧ್ಯೆ ನುಸುಳಿ ದಾಟಿದ ಬಸ್..! ಚಾಲಕರ ಕೈಯನ್ನು ಸ್ಟೇರಿಂಗಿಗೆ ಕಟ್ಟಿ ಹಾಕಿ ಘೋಷಣೆ ಕೂಗಿದ ರೈತರು..!

ನ್ಯೂಸ್ ನಾಟೌಟ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಸೋಮವಾರ, ಬೆಳಗಾವಿಯ ಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ಎರಡು ಸರ್ಕಾರಿ ಬಸ್ಸುಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಬಂದವು. ಓಡಿ ಬಂದು ಅಡ್ಡಗಟ್ಡಿದ ರೈತರು, ಹಸಿರು ಟವಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೇರಿಂಗಿಗೆ ಕಟ್ಟಿ ಹಾಕಿದ ಘಟನೆ ನಡೆದಿದೆ.

ಕನಿಷ್ಠ‌ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ‌ ನಿಗದಿ, ರೈತ ವಿರೋಧಿ ಕಾಯ್ದೆಗಳ ಹಿಂಪಡೆಯುವುದು, ಕಳಸಾ- ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆ ಆರಂಭಿಸಿದರು.

ಅಧಿವೇಶನದ ಮೊದಲ‌ ದಿನವೇ ರೈತರು ತೀವ್ರ ಸ್ವರೂಪದ ಹೋರಾಟಕ್ಕೆ ಇಳಿದರು. ಅವರನ್ನು ಚದುರಿಸಲು ಪೊಲೀಸರು ಮುಂದಾದರು. ಆಗ ತೀವ್ರ ವಾಗ್ವಾದ ನಡೆಯಿತು.

ಹಲವು‌ ವಾಹನಗಳು ಸಾಲಾಗಿ ನಿಂತವು. ಇದರ ಮಧ್ಯೆ ಎರಡು ಬಸ್ಸುಗಳನ್ನು ಚಾಲಕರು ಪಕ್ಕದಲ್ಲಿ ದಾಟಿಸಿಕೊಡು ಮುಂದೆ ಸಾಗಿದರು. ಬೆನ್ನಟ್ಟಿ ಬಂದ ರೈತರು ಬಸ್ ಅಡ್ಡಗಟ್ಡಿದರು.
ಒಳಗೆ ಹತ್ತಿ ಬಸ್ ಚಾಲಕರ ಕೈಗಳನ್ನು ಹಸಿರು ಟವಲ್ ನಿಂದ ಕಟ್ಟಿದರು. ಅದೇ ಕೈಗಳನ್ನು ಬಸ್ಸಿನ ಸ್ಟೇರಿಂಗಿಗೂ ಕಟ್ಟಿದರು. ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದ ಘಟನೆ ವರದಿಯಾಗಿದೆ.

Click

https://newsnotout.com/2024/12/uppinangady-nekkilady-kannada-news-ambulance-hits-home-ground/
https://newsnotout.com/2024/12/toilet-issue-kannada-news-rented-people-9-dna-test-viral-news/
https://newsnotout.com/2024/12/kananda-news-bomb-viral-news-viral-news-police/

Related posts

20 ಗಂಟೆಗಳ ಸತತ ಪ್ರಯತ್ನಕ್ಕೆ ಕೊನೆಗೂ ಸಿಕ್ಕಿತು ಪ್ರತಿಫಲ..! ಬೋರ್‌ವೆಲ್‌ ನಿಂದ ಬದುಕಿಬಂದ 2 ವರ್ಷದ ಮಗು

ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ! 9 ಮಂದಿ ದಾರುಣ ಅಂತ್ಯ!

ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರ..!ರಂಜಾನ್‌ಗೂ ಮುನ್ನವೇ ಈ ನಿರ್ಧಾರ ತೆಗೆದುಕೊಂಡಿದ್ದೇಕೆ?