Latestವಿಡಿಯೋವೈರಲ್ ನ್ಯೂಸ್

ಹುಲ್ಲಿನ ಗುಡಿಸಲಿಗೆ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಒಳಗೆ ಓಡಿ ಪುಸ್ತಕಗಳನ್ನು ಹೊರತಂದ ಪುಟ್ಟ ಬಾಲಕಿ..! ವಿಡಿಯೋ ಕಂಡು ಎಲ್ಲರ ಮೆಚ್ಚುಗೆ

1.1k

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಪುಟ್ಟ ಬಾಲಕಿ ಪಕ್ಕದ ಗುಡಿಸಲು ಸುಟ್ಟು ಇನ್ನೇನು ತನ್ನ ಗುಡಿಸಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ ಎನ್ನುವ ಸಮಯದಲ್ಲಿ ಓಡಿ ಹೋಗಿ ಪುಸ್ತಕವನ್ನು ತೆಗೆದುಕೊಂಡು ಓಡಿ ಬಂದಿದ್ದಾಳೆ.

ಆಕೆ ಪುಸ್ತಕಗಳು ಸುಡದಂತೆ ಕಾಪಾಡಲು ತನ್ನ ಪ್ರಾಣ ಲೆಕ್ಕಿಸದೆ ತನ್ನ ಗುಡಿಸಲಿಗೆ ಓಡಿ ಹೋಗಿ ಪುಸ್ತಕವನ್ನು ಎತ್ತಿಕೊಂಡು ಬಂದಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆಕೆಯ ಗುಡುಸಿಲಿನ ಪಕ್ಕದ ಗುಡಿಸಿಲು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದನ್ನು ಕಾಣಬಹುದು. ಅಧಿಕಾರಿಗಳು ಬೆಂಕಿಯನ್ನು ನಂದಿಸಲು ನೀರಿಗಾಗಿ ಹುಡುಕಾಡುತ್ತಿದ್ದಾರೆ.

ಆಕೆಯ ಚೀಲದಲ್ಲಿ ಪುಸ್ತಕಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ, ಇದು ಓದಿನ ಬಗ್ಗೆ ಆಕೆಗಿರುವ ಗೌರವ ಶ್ರದ್ಧೆಯನ್ನು ಸೂಚಿಸುತ್ತದೆ. ಆಕೆ ಹತ್ತಿರದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ನಾನು ಅಲ್ಲಿಗೆ ಹೋಗಿ ನನ್ನ ಚೀಲವನ್ನು ಹೊರತರದಿದ್ದರೆ ನನ್ನ ಪುಸ್ತಕಗಳು ಮತ್ತು ಪ್ರತಿಗಳು ಸುಟ್ಟುಹೋಗುತ್ತಿದ್ದವು. ನಾನು ನನ್ನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನನ್ಯ ಹೇಳಿದ್ದಾಳೆ ಎನ್ನಲಾಗಿದೆ.

ಅಂಬೇಡ್ಕರ್ ನಗರ ಜಿಲ್ಲೆಯ ಅರೈ ಗ್ರಾಮದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಅನನ್ಯಾ ಅವರ ಹುಲ್ಲಿನ ಗುಡಿಸಲು ಬೆಂಕಿಗೆ ಆಹುತಿಯಾಗಿತ್ತು ಎಂದು ವರದಿಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಬುಲ್ಡೋಜರ್‌ಗಳ ಸಹಾಯದಿಂದ ಅನೇಕ ಗುಡಿಸಲುಗಳನ್ನು ಕೆಡವಿದ್ದರು.

ಸ್ಥಳೀಯ ಎಸ್‌ಪಿ ನಾಯಕರು ಬಾಲಕಿಯನ್ನು ಉತ್ತಮ ಶಾಲೆಗೆ ಸೇರಿಸುವುದಾಗಿ ಮತ್ತು ಆಕೆಯ ಅಧ್ಯಯನದ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ.

See also  ಸೋನು ನಿಗಮ್ ಗೆ ಕನ್ನಡ ಹಾಡು ಹಾಡುವಂತೆ ಕೇಳಿಕೊಂಡ ವಿದ್ಯಾರ್ಥಿ, 'ಕನ್ನಡ.. ಕನ್ನಡ..ಭಯೋತ್ಪಾದಕ ದಾಳಿ ನಡೆದಿದ್ದು ಇದಕ್ಕೆಯೇ' ಖ್ಯಾತ ಗಾಯಕನ ವಿವಾದಾತ್ಮಕ ಹೇಳಿಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget