ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪೊಲೀಸ್ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಅರೆಸ್ಟ್..! ಆತನಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಗಾಗಿ ಹುಡುಕಾಟ..!

233

ನ್ಯೂಸ್ ನಾಟೌಟ್ : ಸಿನಿಮಾದಿಂದ ಪ್ರೇರಣೆ ಪಡೆದು ಇಲ್ಲೊಬ್ಬ ಯುವಕ ಪೊಲೀಸ್ ಪರೀಕ್ಷೆ ಬರೆಯಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ಮುಂಬೈ ನ ಒಶಿವಾರದಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಕುಷ್ನಾ ದಳವಿ(22) ಎಂದು ಗುರುತಿಸಲಾಗಿದೆ.
ಪೊಲೀಸ್ ಚಾಲಕ, ಕಾನ್ಸ್ಟೇಬಲ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು.

ಓಶಿವಾರದ ರಾಯಗಢ ಮಿಲಿಟರಿ ಶಾಲೆಯಲ್ಲೂ ಪರೀಕ್ಷೆ ನಡೆಯುತ್ತಿತ್ತು. ಈ ನಡುವೆ ಅಭ್ಯರ್ಥಿಯೋರ್ವ ಪರೀಕ್ಷೆ ಬರೆಯುವ ವೇಳೆ ಕಿವಿಗೆ ಕೈ ಹಿಡಿದುಕೊಂಡು ಪರೀಕ್ಷೆಬರೆಯುವುದು ಕಂಡು ಬಂದಿದೆ ಇದರಿಂದ ಅನುಮಾನಗೊಂಡ ಪರೀಕ್ಷಾ ಕೇಂದ್ರದಲ್ಲಿದ್ದ ಅಧಿಕಾರಿ ಅಭ್ಯರ್ಥಿಯ ಬಳಿ ತೆರಳಿ ಆತನನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಆತನ ಕಿವಿಯೊಳಗೆ ಏನೋ ಸಣ್ಣ ಸಾಧನ ಇದ್ದಂತೆ ಕಂಡುಬಂದಿದೆ. ಬಳಿಕ ಆತನ ಕಿವಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ವೇಳೆ ಕಿವಿಯೊಳವೆ ಸಣ್ಣ ಬ್ಲೂ ಟೂತ್ ಸಾಧನ ಇರುವುದು ಬೆಳಕಿಗೆ ಬಂದಿದೆ.

ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರ ವಶಕ್ಕೆ ನೀಡಲಾಗಿದೆ. ಅಲ್ಲದೆ ಆತನಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸರು ಆರೋಪಿಯಿಂದ ಸಿಮ್ ಕಾರ್ಡ್, ಮೊಬೈಲ್ ಫೋನ್ ಮತ್ತು ಬ್ಲೂ ಟೂತ್ ಸಾಧನವನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2025/01/kasaragod-kannada-news-doctors-pistachio/
https://newsnotout.com/2025/01/mother-2-child-and-got-love-with-young-man-and-nomore-s/
https://newsnotout.com/2025/01/mall-and-money-viral-video-kannada-news-video-d/
https://newsnotout.com/2025/01/mangaluru-kambala-inaguaration-ullala-mangaluru-v-news/
https://newsnotout.com/2025/01/rishab-shetty-kannada-news-anjaneya-swami-film-issue-kannada-news-cinema/
https://newsnotout.com/2025/01/kambala-ct-ravi-kannada-news-15-days-deadline-viral-latter/
https://newsnotout.com/2025/01/baby-found-in-dust-bin-kannada-news-public-and-police-rescue/
https://newsnotout.com/2025/01/rashmika-mandanna-gym-kannada-news-actress/
See also  ಕಾರು -ಬೈಕ್ ಮುಖಾಮುಖಿ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget