ಕರಾವಳಿಕ್ರೈಂರಾಜ್ಯವೈರಲ್ ನ್ಯೂಸ್

ಹೆದ್ದಾರಿಯಲ್ಲಿ ಸತ್ತು ಬಿದ್ದಿದ್ದ ನಾಯಿಯನ್ನು ಎತ್ತಲು ಹೋದ ಯುವಕನ ದುರಂತ ಸಾವು..! ಏನಿದು ಮನಕಲಕುವ ಘಟನೆ..?

ನ್ಯೂಸ್ ನಾಟೌಟ್: ಹೆದ್ದಾರಿಯಲ್ಲಿ ಸತ್ತು ಬಿದ್ದಿದ್ದ ನಾಯಿಯನ್ನು ರಸ್ತೆಯಿಂದ ಎತ್ತಲು ಹೋದ ಯುವಕ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೂನೇಗಲ್ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಸಾಮಸೇನಹಳ್ಳಿ ಗ್ರಾಮದ ಪ್ರಭು (30) ವರ್ಷ ಎಂದು ಗುರುತಿಸಲಾಗಿದೆ. ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ನಾಯಿಯೊಂದು ಸತ್ತು ಬಿದ್ದಿತ್ತು. ಇದನ್ನು ನೋಡಿದ ಯುವಕರು ಬೈಕ್ ನಿಲ್ಲಿಸಿ ರಸ್ತೆಯಿಂದ ನಾಯಿಯನ್ನು ತೆಗೆಯಲು ಮುಂದಾಗಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಯುವಕನಿಗೆ ಡಿಕ್ಕಿ ಹೊಡೆದು ನಂತರ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಹೋಗಿದೆ.

ಟಿಪ್ಪರ್ ಲಾರಿ ಚಾಲಕನ ಅಜಾಗರುಕತೆಯಿಂದ ಸರಣಿ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಸ್ಕಾರ್ಪಿಯೋ ಕಾರು ಹಾಗೂ ಬೈಕ್ ಸಂಪೂರ್ಣ ಜಖಂಗೊಂಡಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click

https://newsnotout.com/2024/09/bjp-leader-munirathna-again-arrest-due-to-private-video-case-kannada-news/
https://newsnotout.com/2024/09/hdk-kannada-news-nagamangala-issue-he-will-try-to-release-accused-of-that-conflict/
https://newsnotout.com/2024/09/ganeshan-chaturti-incident-similer-to-nagamangala-kannada-news/

Related posts

ಮಗನನ್ನೂ ಯುದ್ಧ ಭೂಮಿಗೆ ಕಳುಹಿಸಿದ್ರಾ ಇಸ್ರೇಲ್ ಪ್ರಧಾನಿ..? ಏನಿದು ಕಣ್ಣೀರ ನಡುವೆ ತ್ಯಾಗದ ಕಥೆ?

ಉಡುಪಿ:ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ,ಸಂಜೆಯೊಳಗೆ ಸಿಗಲಿದೆ ಪ್ರಕರಣದ ಪೂರ್ಣ ಚಿತ್ರಣ: ಎಸ್​ಪಿ ಡಾ. ಅರುಣ್

ಈ ಖ್ಯಾತ ನಟಿಯ ಹೋಟೆಲ್‌ ರೂಮ್‌ನಲ್ಲಿ ಸೀಕ್ರೇಟ್‌ ಕ್ಯಾಮೆರಾ! ಕನ್ನಡ ಸಿನಿಮಾರಂಗದಲ್ಲಿನ ಘಟನೆಯ ಬಗ್ಗೆ ನಟಿಯ ಸ್ಪೋಟಕ ಹೇಳಿಕೆ! ಏನಿದು ಘಟನೆ?