ಕ್ರೈಂಬೆಂಗಳೂರುವೈರಲ್ ನ್ಯೂಸ್

ರಾತ್ರಿ ಕಸದ ಲಾರಿ ಮತ್ತು ಬೈಕ್ ನಡುವೆ ಅಪಘಾತ,ಯುವಕ – ಯುವತಿ ಸಾವು..! ಲಾರಿ ಚಾಲಕನನ್ನು ನಾನೇ ಕೊಲೆ ಮಾಡುವೇ ಎಂದ ಯುವಕನ ತಂದೆ..!

36
Spread the love

ನ್ಯೂಸ್ ನಾಟೌಟ್: ಬಿಬಿಬಿಎಂಪಿ ಕಸದ ಲಾರಿ ಹಾಗೂ ಬೈಕ್‌ ನಡುವೆ ಅಪಘಾತವಾಗಿದ್ದು, ಇಬ್ಬರು ಟೆಕ್ಕಿಗಳು ಮೃತಪಟ್ಟ ಘಟನೆ ಬೆಂಗಳೂರಿನ ಕೆ.ಆರ್‌ ಸರ್ಕಲ್‌ ಬಳಿ ನಡೆದಿದೆ. ಭಾನುವಾರ(ಜು.28) ರಾತ್ರಿ ಈ ಘಟನೆ ನಡೆದಿದ್ದು, ಪ್ರಶಾಂತ್‌ ಮತ್ತು ಶಿಲ್ಪಾ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪ್ರಶಾಂತ್‌ ಮತ್ತು ಶಿಲ್ಪಾ ಮೆಜೆಸ್ಟಿಕ್‌ನಿಂದ ಕೆ.ಆರ್‌. ಸರ್ಕಲ್‌ ಕಡೆ ಬರುತ್ತಿದ್ದಾಗ ಭಾನುವಾರ ರಾತ್ರಿ ಕಸದ ಲಾರಿ ಡಿಕ್ಕಿಯಾಗಿದೆ. ಕೆಳಕ್ಕೆ ಬಿದ್ದ ಇಬ್ಬರ ಮೇಲೂ ವಾಹನದ ಚಕ್ರ ಹರಿದಿದೆ. ಗಂಭೀರ ಗಾಯಗೊಂಡ ಇಬ್ಬರು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ನಿವಾಸಿಯೇ ಆಗಿರುವ ಪ್ರಶಾಂತ್‌, ಶಿಲ್ಪಾ ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇಬ್ಬರೂ ಮೆಜೆಸ್ಟಿಕ್‌ನಿಂದ ಕೆ.ಆರ್‌ ಸರ್ಕಲ್‌ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಕೆಆರ್‌ ವೃತ್ತದ ತಿರುವಿನಲ್ಲಿ ಘಟನೆ ನಡೆದಿದ್ದು, ಬೈಕ್‌ಗೆ ಡಿಕ್ಕಿ ಹೊಡೆದರೂ ಲಾರಿ ನಿಲ್ಲಿಸದೇ ಸುಮಾರು 10 ಮೀಟರ್‌ನಷ್ಟು ದೂರಕ್ಕೆ ಬೈಕ್‌ ಸವಾರರನ್ನ ಲಾರಿ ಡ್ರೈವರ್ ಎಳೆದೊಯ್ದಿದ್ದಾನೆ. ” ನನ್ನ ಮಗ ಹುಟ್ಟಿದ್ದು ಈ ಆಸ್ಪತ್ರೆಯಲ್ಲೇ ಈಗ ಸತ್ತಿದ್ದು ಕೂಡ ಈ ಆಸ್ಪತ್ರೆಯಲ್ಲೇ, ಒಂದು ವೇಳೆ ಆ ಲಾರಿ ಚಾಲಕನ್ನು ಬಂಧಿಸದ್ದಿದರೆ ನಾನೇ ಕೊಲೆ ಮಾಡುವೇ ” ಎಂದು ತಂದೆ ಲೋಕೇಶ್‌ ಹೇಳಿಕೆ ನೀಡಿದ್ದಾರೆ.

Click

https://newsnotout.com/2024/07/suspence-women-found-in-forest-as-tied-to-the-tree-police/
https://newsnotout.com/2024/07/darshan-food-and-health-issue-kannada-news-highcourt-e/
https://newsnotout.com/2024/07/dakshina-kannada-news-moodabidire-family-incident-viral-news/
https://newsnotout.com/2024/07/urvashi-rautela-video-viral-issue-clarification-from-her-kannada-news/
https://newsnotout.com/2024/07/actress-kannada-news-bidding-hollywood-crore-rupees/
See also  ಬೆಂಗಳೂರು ಟ್ರಾಫಿಕ್ ಫಜೀತಿ, ಕಾರು ಬಿಟ್ಟು ಮೆಟ್ರೋ ಹತ್ತಿದ ಮದುಮಗಳು! ವಿಡಿಯೋ ವೈರಲ್
  Ad Widget   Ad Widget   Ad Widget   Ad Widget