ದೇಶ-ಪ್ರಪಂಚವೈರಲ್ ನ್ಯೂಸ್

ಹರಾಜಿನಲ್ಲಿ ಬರೋಬ್ಬರಿ 56 ಲಕ್ಷ ರೂ.ಗೆ ಮಾರಾಟವಾದ 100ರೂ. ನೋಟು..! ಏನಿದರ ವಿಶೇಷತೆ..?

ನ್ಯೂಸ್ ನಾಟೌಟ್ : ಹರಾಜಿನಲ್ಲಿ ನೂರು ರೂಪಾಯಿ ಮುಖ ಬೆಲೆಯ ಭಾರತೀಯ ಕರೆನ್ಸಿ ನೋಟು ಬರೋಬ್ಬರಿ 56 ಲಕ್ಷ ರೂ. ಗಳಿಗೆ ಮಾರಾಟವಾಗಿದೆ. ಇತ್ತೀಚಿಗೆ ಲಂಡನ್‌ ನಲ್ಲಿ ನಡೆದ ಹರಾಜಿನಲ್ಲಿ 100 ರೂ. ಮುಖಬೆಲೆಯ ಭಾರತೀಯ ಕರೆನ್ಸಿ ನೋಟು ಬರೋಬ್ಬರಿ 56,49,650 ರೂ. ಗಳಿಗೆ ಮಾರಾಟವಾಗಿದೆ. ಇದನ್ನು ‘ಹಜ್ ನೋಟು’ ಎಂದು ಕರೆಯಲಾಗುತ್ತದೆ.

20 ನೇ ಶತಮಾನದ ಮಧ್ಯದಲ್ಲಿ, ಅಂದರೆ1950 ರ ದಶಕದಲ್ಲಿ ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುತ್ತಿದ್ದ ಭಾರತೀಯ ಯಾತ್ರಾರ್ಥಿಗಳಿಗಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ವಿಶೇಷ ಕರೆನ್ಸಿ ನೋಟನ್ನು ಬಿಡುಗಡೆ ಮಾಡಿತ್ತು. ಅಕ್ರಮ ಚಿನ್ನ ಖರೀದಿಯನ್ನು ತಡೆಯುವ ಉದ್ದೇಶದಿಂದ ಈ ಹಜ್‌ ನೋಟನ್ನು ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.

ಈ ನೋಟುಗಳು ಸಾಮಾನ್ಯ ಭಾರತೀಯ ನೋಟುಗಳಿಗಿಂತ ವಿಭಿನ್ನ ಬಣ್ಣದ್ದಾಗಿದ್ದವು. ಈ ನೋಟುಗಳು ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್, ಕುವೈತ್ ಮತ್ತು ಓಮನ್‌ ನಂತಹ ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ಮಾನ್ಯವಾಗಿತ್ತು. 1970 ರಲ್ಲಿ ಆರ್‌ ಬಿಐ ಈ ಹಜ್‌ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ನಿಲ್ಲಿಸಿತು. ಈ ವಿಶೇಷ ನೋಟು ಇದೀಗ ಭಾರೀ ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿದೆ.

ಅಷ್ಟು ಮಾತ್ರವಲ್ಲದೆ ಇತ್ತೀಚಿಗೆ ನಡೆದ ಹರಾಜಿನಲ್ಲಿ 10 ರೂ.ಗಳ ಎರಡು ಅಪರೂಪದ ನೋಟುಗಳು ಕೂಡ ಮಾರಾಟವಾಗಿದೆ. ಒಂದು 6.90 ಲಕ್ಷಕ್ಕೆ ಮಾರಾಟವಾದರೆ ಇನ್ನೊಂದು ನೋಟು 5.80 ಲಕ್ಷ ರೂ. ಗಳಿಗೆ ಮಾರಾಟವಾಗಿದೆ ಎನ್ನಲಾಗಿದೆ.

Click

https://newsnotout.com/2025/01/kerala-kodamanittaya-kannada-news-elephant-in-temple-festival/
https://newsnotout.com/2025/01/isro-narayanan-appointeed-as-space-secretory-as-well-as-chief/
https://newsnotout.com/2025/01/hmpv-viras-issue-health-department-kannada-news-d/
https://newsnotout.com/2025/01/udupi-fish-theft-kannada-news-at-night-viral-news/
https://newsnotout.com/2025/01/kannada-news-actress-honey-rose-viral-post-business-man-arrested/
https://newsnotout.com/2025/01/mysore-central-jail-kannada-news-viral-news-bekary-kannada-news/

Related posts

ರಾಕಿಂಗ್ ಸ್ಟಾರ್‌ ಯಶ್‌ ಜತೆಗೆ ನಟಿಸಲಿದ್ದಾರೆಯೇ ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌?ಈ ಬಗ್ಗೆ ‘ಟಾಕ್ಸಿಕ್’ ಚಿತ್ರ ತಂಡ ಹೇಳಿದ್ದೇನು?

ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕಾರ..! ಪ್ರಾಧ್ಯಾಪಕಿ ಸಹಿತ 10 ಮಂದಿ ಅರೆಸ್ಟ್..!

ನಟ ದರ್ಶನ್, ಅಭಿಷೇಕ್ ಅಂಬರೀಷ್ ಸೇರಿ ಹಲವರ ವಿರುದ್ಧ ಪೊಲೀಸರಿಂದ ನೋಟೀಸ್ ಜಾರಿ..! ಅಷ್ಟಕ್ಕೂ ರಾತ್ರಿ ಪಬ್ ಪಾರ್ಟಿಯಲ್ಲೇನಾಯ್ತು..?