ಕ್ರೈಂಬೆಂಗಳೂರುವೈರಲ್ ನ್ಯೂಸ್

ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದನಾ ಜಿಮ್ ಕೋಚ್? ಈ ಬಗ್ಗೆ ಯುವತಿ ಹೇಳಿದ್ದೇನು? ಘಟನೆ ನಡೆದದ್ದೆಲ್ಲಿ?

ನ್ಯೂಸ್ ನಾಟೌಟ್: ಫಿಟ್ನೆಸ್ ಸೆಂಟರ್ ನಲ್ಲಿ ಯುವತಿ ಸ್ನಾನ ಮಾಡೋದನ್ನು ಸೆರೆ ಹಿಡಿದ ಜಿಮ್​​ ಕೋಚ್​​ನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಾಮಮೂರ್ತಿನಗರದ ಫಿಟ್ನೆಸ್ ಸೆಂಟರ್ ನಲ್ಲಿ ಘಟನೆ ನಡೆದಿದ್ದು, ಬಾಣಸವಾಡಿ ಪೊಲೀಸರು( police) ಜಿಮ್ ಕೋಚ್ ಸಿಬಿಚಾನ್ ಎಂಬಾತನನ್ನು ಅರೆಸ್ಟ್​ ಮಾಡಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆರೋಪಿ ಕೃತ್ಯ ಬೆಳಕಿಗೆ ಬಂದಿದೆ.(gym coaching centre)

ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಿಟ್ನೆಸ್​ ಸೆಂಟರ್​ನಲ್ಲಿ ವರ್ಕ್​ ಔಟ್ ಮುಗಿಸಿದ್ದ ಯುವತಿ ಸ್ನಾನಕ್ಕೆಂದು ಬಾತ್​ ರೂಮ್​​​ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಜಿಮ್​ ಕೋಚ್​ ಬಾತ್​​ ರೂಮ್​​ನ ಕಿಟಕಿಯಲ್ಲಿ ಮೊಬೈಲ್​ ಇಟ್ಟು ವಿಡಿಯೋ ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಏನೋ ಶಬ್ದ ಆಯ್ತು ಅಂತ ಬಾತ್​ ರೂಮ್​​ನಿಂದ ಯುವತಿ ಹೊರ ಬಂದು ನೋಡಿದ ಸಂದರ್ಭದಲ್ಲಿ ಅಲ್ಲಿ ಯಾರು ಇರಲಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಯುವತಿ ಜಿಮ್​​ನಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆರೋಪಿ ವಿಡಿಯೋ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಘಟನೆ ಸಂಬಂಧ ಕೂಡಲೇ ಯುವತಿ ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಪಿಟ್ನೆಸ್ ಕೋಚ್ ಸಿಬಿಯಾಚನ್ ನನ್ನು ಬಂಧನ ಮಾಡಿದ್ದಾರೆ ಎನ್ನಲಾಗಿದೆ.

Related posts

ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾದ ನಟಿ ರಮ್ಯಾ..! ಆದಷ್ಟು ಬೇಗ ಮತ್ತೆ ನಟಿಸುತ್ತೇನೆ ಎಂದ ನಟಿ

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ,ಕರ್ನಾಟಕದಲ್ಲಿ ಯಾವಾಗ..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಹಲವು ಕುಟುಂಬಗಳ ವಿಚ್ಚೇದನ ತಡೆದಿದ್ದ ವಕೀಲನ ಪತ್ನಿಯಿಂದಲೇ ಡಿವೋರ್ಸ್‌..! 138 ದಂಪತಿಯನ್ನು ಒಂದಾಗಿಸಿದ್ದ ವಕೀಲನಿಗೆ ಬಂತು ಇದೆಂಥ ಸಂಕಷ್ಟ..?