ಕ್ರೈಂಬೆಂಗಳೂರುವೈರಲ್ ನ್ಯೂಸ್

ಡೆತ್‌ ನೋಟ್‌ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ..! ಅತ್ತೆ-ಮಾವ ನಾಪತ್ತೆ..!

ನ್ಯೂಸ್ ನಾಟೌಟ್: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ನಡೆದಿದೆ.

ರೂಪಾ (29) ಮೃತ ಮಹಿಳೆ ಎಂದು ಗುರುತಿಸಲಾಗಿದೆ. 2 ವರ್ಷಗಳ ಹಿಂದೆಯಷ್ಟೇ ಸುರೇಶ್‌ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಸುರೇಶ್‌ ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದ.

ಮದುವೆ ಸಮಯದಲ್ಲಿ 100 ಗ್ರಾಂ ಒಡವೆ ಸಹ ನೀಡಿದ್ದರು. ಆದ್ರೆ ಸುರೇಶ್‌ ಕುಟುಂಬಸ್ಥರು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆ ಹಣವನ್ನು ತೆಗೆದುಕೊಂಡು ಬಾ ಎಂದು ಆಕೆಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತ ರೂಪಾ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎನ್ನಲಾಗಿದೆ.

ಅಲ್ಲದೇ ಸಾವಿಗೂ ಮುನ್ನ ರೂಪಾ ಡೆತ್‌ ನೋಟ್‌ ಬರೆದಿಟ್ಟು, ಅದರಲ್ಲಿ ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ, ಅತ್ತೆ ದೇವಮ್ಮ ಕಾರಣ ಎಂದು ಬರೆದಿದ್ದಾರೆ. ಸದ್ಯ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿ ಸುರೇಶ್‌ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತಲೆಮರಿಸಿಕೊಂಡಿರುವ ಸುರೇಶ್‌ ತಂದೆ ತಾಯಿಗಾಗಿ ಶೋಧ ನಡೆಸಿದ್ದಾರೆ.

Click

https://newsnotout.com/2024/11/cinema-kannada-news-drone-prathap-hero-viral-news-d/
https://newsnotout.com/2024/11/devotee-theft-the-saibaba-statue-kannada-news-f-temple/
https://newsnotout.com/2024/11/mahindra-thar-kannada-news-video-viral-online-viral-dd/
https://newsnotout.com/2024/11/vitla-kannada-news-panjigadde-nomore-kannada-news-f/
https://newsnotout.com/2024/11/vikram-gowda-encounter-dgp-warning-udupi-kannada-news-viral-news-d/
https://newsnotout.com/2024/11/belthangady-bike-case-issue-elephant-attack-viral-news/
https://newsnotout.com/2024/11/naxal-vikram-gowda-kannada-news-suddi-vikram-gowda-udupi/

Related posts

ದಕ್ಷಿಣ ಕನ್ನಡ: ಕಾರು ಢಿಕ್ಕಿಯಾಗಿ ಧರೆಗುರುಳಿದ ವಿದ್ಯುತ್ ಕಂಬ..! ಸ್ಥಳೀಯರಿಗೆ ವಿದ್ಯುತ್ ಪೂರೈಕೆ ಸ್ಥಗಿತ

ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ..! ಊಟದ ತಟ್ಟೆಯಲ್ಲಿ ಹಲ್ಲಿ ಪತ್ತೆ..!

ಅಂತ್ಯಕ್ರಿಯೆಗೆ ಜಾಗವಿಲ್ಲದೆ ನಡು ರಸ್ತೆಯಲ್ಲೇ ಶವ ಸಂಸ್ಕಾರ ಮಾಡಿದ್ರು..! ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಕಿರಾತಕ ಯಾರು..?