ಕ್ರೈಂಬೆಂಗಳೂರುರಾಜಕೀಯವೈರಲ್ ನ್ಯೂಸ್

ರಾತ್ರಿ ನೇಣಿಗೆ ಶರಣಾದ ಕಾಂಗ್ರೆಸ್​​ ಶಾಸಕನ ಪತ್ನಿ..! ಪತಿಗೆ ವೀಡಿಯೋ ಕಾಲ್ ಮಾಡಿ ತಾನು ಸಾಯುತ್ತಿದ್ದೇನೆ ಎಂದಿದ್ದ ಸರ್ಕಾರಿ ಶಾಲಾ ಶಿಕ್ಷಕಿ..! ಶಾಸಕನ ಬಗ್ಗೆ ಅನುಮಾನಗೊಂಡ ಪೊಲೀಸರು..!

ನ್ಯೂಸ್ ನಾಟೌಟ್ : ಕಾಂಗ್ರೆಸ್​​ ಶಾಸಕ ಮೇಡಿಪಲ್ಲಿ ಸತ್ಯಂ ಎಂಬವರ ಪತ್ನಿ ರೂಪಾದೇವಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕರೀಂನಗರ ಜಿಲ್ಲೆಯ ಚೊಪ್ಪದಂಡಿಯಲ್ಲಿ ನಡೆದಿದೆ. ಅಲ್ವಾಲ್ ಪಂಚಶೀಲಾ ಕಾಲೋನಿಯ ಮನೆಯೊಂದರಲ್ಲಿ ಗುರುವಾರ(ಜೂ.20) ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

12 ವರ್ಷಗಳ ಹಿಂದೆ ಮೇಡಿಪಲ್ಲಿ ಸತ್ಯಂ ರೂಪಾದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಪತ್ನಿ ರೂಪಾದೇವಿ ಜೊತೆ ವೈಮನಸ್ಯ ಇರುವ ಶಂಕೆ ವ್ಯಕ್ತವಾಗಿದೆ. ರೂಪಾದೇವಿ ಮೇಡ್ಚಲ್ ಮುನಿರಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಕೊಂಪಲ್ಲಿ ಪೇಟ್ ಬಶೀರಾಬಾದ್‌ನ ದವೇರಿಯಾ ವಿಲ್ಲಾಸ್‌ನಲ್ಲಿ ನೆಲೆಸಿದ್ದರು. ಆದರೆ, ಒಂದು ತಿಂಗಳ ಹಿಂದೆಯಷ್ಟೇ ಹೈದರಾಬಾದ್‌ನ ಅಲ್ವಾಲ್‌ನ ಪಂಚಶೀಲಾ ಕಾಲೋನಿ ರಸ್ತೆ ಸಂಖ್ಯೆ 12ಕ್ಕೆ ಸ್ಥಳಾಂತರಗೊಂಡಿದ್ದಾರೆ.

ಸತ್ಯಂ-ರೂಪಾದೇವಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಯೋಜಿತ್ (11) ಮತ್ತು ಮಗಳು ರಿಷಿಕಾ ಶ್ರೀ (9). ಕೆಲ ದಿನಗಳಿಂದ ಶಾಸಕ ದಂಪತಿ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎಂದು ವರದಿಯಾಗಿದೆ. ರೂಪಾದೇವಿ ವೀಡಿಯೋ ಕಾಲ್ ಮಾಡಿ ಶಾಸಕ ಸತ್ಯಂಗೆ ತಾನು ಸಾಯುತ್ತಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಕೂಡಲೇ ಚೊಪ್ಪದಂಡಿಯಿಂದ ಕಾರಿನಲ್ಲಿ ಹೈದರಾಬಾದ್ ಗೆ ಹೊರಟು ಬಂದಿದ್ದಾರೆ. ಆದರೆ ಅಲ್ವಾಲ್ ತಲುಪಿದಾಗ ರೂಪಾದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಬೆಳ್ತಂಗಡಿ: ಅಪಘಾತದಲ್ಲಿ ಸೊಂಟದ ಬಲ ಕಳೆದುಕೊಂಡು 14 ವರ್ಷ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶಿಕ್ಷಕಿ ಸಾವು, ಮಲಗಿದ್ದಲ್ಲಿಂದಲೇ ವಿದ್ಯಾರ್ಥಿಗೆ ಪಾಠ ಹೇಳಿಕೊಡುತ್ತಿದ್ದ ಛಲಗಾರ್ತಿ ನೆನಪು ಮಾತ್ರ..!

ಮಡಿಕೇರಿ:ಭೀಕರ ಬೈಕ್ ಅಪಘಾತ,ಕಾಲೇಜ್ ವಿದ್ಯಾರ್ಥಿನಿ ದಾರುಣ ಅಂತ್ಯ

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ