ವೈರಲ್ ನ್ಯೂಸ್ಸಿನಿಮಾ

ನಾನು ಅಲ್ಲು ಅರ್ಜುನ್‌ ನ ಅಪ್ಪಟ ಅಭಿಮಾನಿ ಎಂದ ಅಮಿತಾಬ್‌ ಬಚ್ಚನ್‌, ಅಲ್ಲು ಅರ್ಜುನ್‌ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡ ಬಾಲಿವುಡ್ ನಟ

240

ನ್ಯೂಸ್ ನಾಟೌಟ್: ‘ಪುಷ್ಪ–2 ದಿ ರೂಲ್‌’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ‘ನಾನು ಅಲ್ಲು ಅರ್ಜುನ್‌ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ, ನನ್ನಂತಹ ನಟರಿಗೆ ಅಲ್ಲು ಅರ್ಜುನ್‌ ಸ್ಪೂರ್ತಿಯಾಗಿದ್ದಾರೆ’ ಎಂದು ಬಣ್ಣಿಸಿದ್ದಾರೆ.

ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್‌ ಅವರ ಬಳಿ ಬಾಲಿವುಡ್‌ ನಲ್ಲಿ ಯಾವ ನಟ ನಿಮಗೆ ಸ್ಪೂರ್ತಿಯಾಗಿದ್ದಾರೆ ಎನ್ನುವ ಪ್ರಶ್ನೆಗೆ, ‘ನಟ ಅಮಿತಾಬ್‌ ಬಚ್ಚನ್ ಅವರು ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ನಮ್ಮಂತಹವರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ’ ಎಂದು ಹೊಗಳಿದ್ದರು.

ಸೋಮವಾರ ಅಲ್ಲು ಅರ್ಜುನ್‌ ಅವರು ಮಾತನಾಡಿರುವ ವಿಡಿಯೋದ ತುಣುಕನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಹಂಚಿಕೊಂಡಿರುವ ಬಿಗ್‌ ಬಿ, ‘ಅರ್ಜುನ್‌ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ’ ಎಂದು ಹಾರೈಸಿದ್ದಾರೆ. ‘ನಿಮ್ಮ ಮಾತುಗಳಿಂದ ವಿನಮ್ರನಾಗಿದ್ದೇನೆ, ನನ್ನ ಅರ್ಹತೆಗಿಂತ ಹೆಚ್ಚಿನದನ್ನು ನೀಡುತ್ತಿದ್ದೀರಿ, ನಾವು ನಿಮ್ಮ ಕೆಲಸ ಮತ್ತು ಪ್ರತಿಭೆಗೆ ಅಭಿಮಾನಿಯಾಗಿದ್ದೇವೆ. ನಮ್ಮೆಲ್ಲರಿಗೂ ನೀವು ಸ್ಪೂರ್ತಿಯಾಗಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

ಭಾನುವಾರದ ವರದಿಯ ಪ್ರಕಾರ ಪುಷ್ಪ–2 ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ₹621 ಕೋಟಿ ಗಳಿಕೆ ಮಾಡಿದೆ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್‌ ಹೇಳಿದೆ.

Click

https://newsnotout.com/2024/12/uppinangady-nekkilady-kannada-news-ambulance-hits-home-ground/
https://newsnotout.com/2024/12/toilet-issue-kannada-news-rented-people-9-dna-test-viral-news/
https://newsnotout.com/2024/12/kananda-news-bomb-viral-news-viral-news-police/
https://newsnotout.com/2024/12/kannada-news-bus-viral-news-belagavi-viral-news-s/
See also  ಭಾರತೀಯ ವಾಯುಪಡೆ ವಿಮಾನ ಪತನವಾದದ್ದೇಗೆ..? ಮುಂದೇನಾಯ್ತು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget