ನ್ಯೂಸ್ ನಾಟೌಟ್: ಅಫ್ಘಾನಿಸ್ತಾನದಲ್ಲಿ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಅಫ್ಘಾನ್ ನ ಘೋರ್ ಪ್ರಾಂತ್ಯದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಅಗೆಯುತ್ತಿದ್ದಾಗ ಪುರಾತನ ಕಾಲದ ಮಣ್ಣಿನ ಕಳಶವೊಂದು ಪತ್ತೆಯಾಗಿದೆ.
ಅದನ್ನು ತೆರೆದು ನೋಡಿದಾಗ ಘುರಿದ್ ರಾಜವಂಶದ 60 ಚಿನ್ನದ ನಾಣ್ಯಗಳು ಇದ್ದವು. ಈ ನಾಣ್ಯಗಳನ್ನ ಜೇಡಿಮಣ್ಣಿನಿಂದ ಮಾಡಿದ ಕಳಶದಲ್ಲಿ ಮುಚ್ಚಿಡಲಾಗಿತ್ತು. ನಾಣ್ಯಗಳಲ್ಲಿ ಕೆಲವು ಹಾನಿಯಾಗಿವೆ ಎಂದು ಘೋರ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಈ ನಾಣ್ಯಗಳ ಐತಿಹಾಸಿಕ ಅಥವಾ ಆರ್ಥಿಕ ಮೌಲ್ಯವನ್ನು ಇನ್ನೂ ನಿರ್ಧಾರ ಮಾಡಿಲ್ಲ. ಘುರಿದ್ ಸಾಮ್ರಾಜ್ಯವು ಆಧುನಿಕ ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕ್ರಿ.ಶ. 786 ರಿಂದ 1215 ರವರೆಗೆ ಆಳಿತ್ತು. ಫಿರೋಜ್ಕೋಹ್ ಅವರ ರಾಜಧಾನಿಯಾಗಿತ್ತು.
ಈ ರಾಜವಂಶವು ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪ, ವ್ಯಾಪಾರ ಮತ್ತು ಪರ್ಷಿಯನ್ ಸಂಸ್ಕೃತಿಯನ್ನು ಹರಡಿತ್ತು. ಪತ್ತೆಯಾದ ಚಿನ್ನದ ನಾಣ್ಯಗಳು ಐತಿಹಾಸಿಕ ಪ್ರಾಮುಖ್ಯತೆ ಹೊಂದಿವೆ.
ಭಾರತ-ಪಾಕ್ ಕದನ ವಿರಾಮ ಡೊನಾಲ್ಡ್ ಟ್ರಂಪ್ ನಿಂದ ಆದದ್ದು ಎಂದ ರಷ್ಯಾ..! ಟ್ರಂಪ್ ಹೇಳಿಕೆಗೆ ರಷ್ಯಾದಿಂದ ಅನುಮೋದನೆ..!