Latestಕ್ರೈಂಬೆಂಗಳೂರು

ದುಷ್ಟಶಕ್ತಿ ಓಡಿಸುತ್ತೇನೆಂದು ಮಹಿಳೆಗೆ 5 ಲಕ್ಷ ರೂ. ವಂಚಿಸಿದ ಜ್ಯೋತಿಷಿ..! ಹೋಟೆಲ್ ​ನಲ್ಲೇ ಪೂಜೆ, ಪ್ರಕರಣ ದಾಖಲು..!

202

ನ್ಯೂಸ್‌ ನಾಟೌಟ್‌: ನಿಮ್ಮಲ್ಲಿರುವ ದುಷ್ಟಶಕ್ತಿಯನ್ನು ಓಡಿಸುತ್ತೇನೆ ಎಂದು ಜ್ಯೋತಿಷಿ ಬೆಂಗಳೂರಿನ ವಿಭೂತಿಪುರದ ನಿವಾಸಿಯಾಗಿರುವ 33 ವರ್ಷದ ಮಹಿಳೆಯೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ ಘಟನೆ ನಡೆದಿದೆ.

ವಂಚಕನ ವಿರುದ್ಧ ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ 2023ರ ಡಿಸೆಂಬರ್ ​ನಲ್ಲಿ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೆ, ಮಹಿಳೆಯ ಕೈ ಮತ್ತು ಕಾಲುಗಳು ಊದಿಕೊಂಡಿದ್ದವು. ಈ ವಿಚಾರವನ್ನು ವಂಚನೆಗೊಳಗಾದ ಮಹಿಳೆ ತನ್ನ ಸ್ನೇಹಿತರೊಬ್ಬರಿಗೆ ಹೇಳಿದ್ದಾರೆ. ಆಗ, ಮಹಿಳೆಯ ಸ್ನೇಹಿತರು ಓರ್ವ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ.

ಜ್ಯೋತಿಷಿ, ಮಹಿಳೆಗೆ ನಿಮ್ಮನ್ನು 15 ದುಷ್ಟಶಕ್ತಿಗಳು ಕಾಡುತ್ತಿವೆ. ಪೂಜೆಗಳನ್ನು ಮಾಡುವ ಮುಖಾಂತರ ದುಷ್ಟಶಕ್ತಿಗಳನ್ನು ಓಡಿಸಬಹುದು ಎಂದಿದ್ದಾರೆ. ನಂತರ, ವಂಚನೆಗೊಳಗಾದ ಮಹಿಳೆ 2023 ರ ಡಿಸೆಂಬರ್​ 14 ರಂದು ತಮ್ಮ ಜಾತಕ ಮತ್ತು ಫೋಟೋಗಳನ್ನು ಜ್ಯೋತಿಷಿಗೆ ಕಳುಹಿಸಿದ್ದಾರೆ. ಹಾಗೇ, ಆನ್ ​ಲೈನ್​ ಮೂಲಕ ಹಣ ಪಾವತಿಸಿದ್ದಾರೆ. ಮೊದಲಿಗೆ ಮಹಿಳೆ ಜ್ಯೋತಿಷಿಗೆ 150 ರೂ. ನಂತರ 151 ರೂ. ವರ್ಗಾವಣೆ ಮಾಡಿದ್ದಾರೆ. ಬಳಿಕ, 1 ಲಕ್ಷ ರೂ. ನಗದು ರೂಪದಲ್ಲಿ ನೀಡುವುದರ ಜೊತೆಗೆ ಆನ್ ​ಲೈನ್ ​ನಲ್ಲಿ ಸುಮಾರು 4.2 ಲಕ್ಷ ರೂ. ವರ್ಗಾಯಿಸಿದ್ದಾರೆ.

2024ರ ಸೆಪ್ಟೆಂಬರ್ 09 ರಂದು ಜ್ಯೋತಿಷಿ ಕೋರಮಂಗಲದ ಹೋಟೆಲ್ ​ವೊಂದರಲ್ಲಿ ಪೂಜೆ ಮಾಡಿದ್ದಾನೆ. ಈ ಪೂಜೆಯಲ್ಲಿ ವಂಚನೆಗೊಳಗಾದ ಮಹಿಳೆ ಕೂಡ ಭಾಗಿಯಾಗಿದ್ದರು. ಜ್ಯೋತಿಷಿ ಮೊದಲಿಗೆ ನಿಂಬೆ ಹಣ್ಣುಗಳನ್ನು ಕತ್ತರಿಸಿ, ಧೂಪ ಹಚ್ಚಿದ್ದಾನೆ. ನಂತರ ಮಹಿಳೆಯ ಮುಖಕ್ಕೆ ಬೂದಿ ಎರಚಿದ್ದಾನೆ. ನಂತರ, ಮಹಿಳೆಗೆ ನವಿಲು ಗರಿಗಳಿಂದ ಹೊಡೆದು, ಅವರ ಕೂದಲನ್ನು ಹಿಡಿದು “ಆತ್ಮ ದೂರ ಹೋಗು” ಎಂದು ಕಿರಿಚಿದ್ದಾನೆ. ಪೂಜೆಗಳೆಲ್ಲ ಮುಗಿದ ನಂತರ ದುಷ್ಟಶಕ್ತಿಗಳು ನಿಮ್ಮನ್ನು ಬಿಟ್ಟು ಹೋದವು ಎಂದಿದ್ದಾನೆ.

ಆದರೆ, ಮಹಿಳೆಯ ಆರೋಗ್ಯದಲ್ಲಿ ಮಾತ್ರ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆ ಹಣ ಮರುಪಾವತಿಸುವಂತೆ ಜ್ಯೋತಿಷಿಗೆ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ಜ್ಯೋತಿಷಿ ಮಾತ್ರ ಮಹಿಳೆಯ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ನಂತರ ಮಹಿಳೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧಾರದ ಮೇಲೆ ಜ್ಯೋತಿಷಿ ವಿರುದ್ಧ ಬಿಎನ್ ​ಎಸ್​ ಸೆಕ್ಷನ್​ 318ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂಧೂ ಜಲ ಒಪ್ಪಂದದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕ್ ನಿಂದ ಭಾರತಕ್ಕೆ ಪತ್ರ..! ಭಾರತದ ಜಲಶಕ್ತಿ ಸಚಿವಾಲಯಕ್ಕೆ ಮನವಿ..!

See also  ಮೊಬೈಲ್‌ನಲ್ಲಿ ಒಂದನ್ನು ಒತ್ತಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ..!:ಏನಿದು ಘಟನೆ?ಕರೆ ಮಾಡಿದ ಆ ಅಪರಿಚಿತ ವ್ಯಕ್ತಿ ಯಾರು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget