ಕ್ರೈಂರಾಜ್ಯ

ಚಾಲಕನಿಗೆ ಮೂರ್ಛೆ ರೋಗ ಬಂದು ಮರಕ್ಕೆ ಡಿಕ್ಕಿ ಹೊಡೆದ KSRTC ಬಸ್..! 40 ಮಂದಿ ಪ್ರಯಾಣಿಕರು ಪಾರು..!

613

ನ್ಯೂಸ್ ನಾಟೌಟ್: ಚಾಲಕ ಮೂರ್ಛೆ ಬಿದ್ದು ನಿಯಂತ್ರಣ ತಪ್ಪಿದ KSRTC ಬಸ್​ ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ಹನೂರು ಚಾಮರಾಜನಗರ ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ ಇಂದು(ಫೆ.9) ನಡೆಯಿತು.

ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್​​ ಇದಾಗಿದ್ದು, ಚಾಲಕನಿಗೆ ದಿಢೀರ್ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಪರಿಣಾಮ, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಮುಂಭಾಗದಲ್ಲಿ ಕುಳಿತಿದ್ದ ಐವರು ಗಾಯಗೊಂಡಿದ್ದಾರೆ.

“ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್​ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೇ ಹೋಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಭಾಗಕ್ಕೆ ಪಲ್ಟಿಯಾಗಿ ಅಪಾರ ಪ್ರಮಾಣದ ಸಾವುನೋವು ಆಗುತ್ತಿತ್ತು” ಎನ್ನಲಾಗಿದೆ.

“ಪ್ರತಿದಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೊಳ್ಳೇಗಾಲ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ತೆರಳುತ್ತಾರೆ. ಇಂದು(ಫೆ.9) ಭಾನುವಾರ ರಜೆ ಇದ್ದುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ” ಎಂದು ಸ್ಥಳೀಯರು ಹೇಳಿದ್ದಾರೆ.

Click

ಕುಟುಂಬ ಸಮೇತರಾಗಿ ಮಹಾ ಕುಂಭಮೇಳಕ್ಕೆ ತೆರಳಿದ ಡಿಕೆಶಿ, ಮುಂಜಾನೆ ಪ್ರಯಾಗ್‌ ರಾಜ್‌ ಕಡೆ ಪ್ರಯಾಣ

ಪುತ್ತೂರಿನ ಯುವಕ ಆವಿಷ್ಕರಿಸಿದ ಡ್ರೋನ್‌ ಸೇನೆ ಆಯ್ಕೆ..! ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ..!

ಕಾರ್ಯಕರ್ತ ಅಸ್ವಸ್ಥಗೊಳ್ಳುತ್ತಿದ್ದಂತೆ ಭಾಷಣ ನಿಲ್ಲಿಸಿ ನೆರವಿಗೆ ಸೂಚಿಸಿದ ಮೋದಿ..! ಇಲ್ಲಿದೆ ವಿಡಿಯೋ

https://newsnotout.com/pakisthan-bengaluru-star-cricketer-viral-news-video/

ಕಾಶಿಯಲ್ಲಿ ನದಿಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಕರ್ನಾಟಕದ ವ್ಯಕ್ತಿ ಸಾವು..! ಕುಂಭಮೇಳದಲ್ಲಿ ಭಾಗಿಯಾಗಿ ಕಾಶಿಗೆ ತೆರಳಿದ್ದ ಕುಟುಂಬದ ಕರುಣಾಜನಕ ಕಥೆ..!

See also  ದೊಡ್ಡಡ್ಕ: ಶಾಮಿಯಾನ ವಾಹನ - ಕಾರಿನ ನಡುವೆ ಅಪಘಾತ, ಎರಡೂ ವಾಹನ ಜಖಂ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget