Latestಕರಾವಳಿಕ್ರೈಂ

ವಿಚಾರಣೆಗೆ ಹಾಜರಾಗಲು 20 ದಿನಗಳ ಸಮಯಾವಕಾಶ ಕೋರಿದ ಮುತ್ತಪ್ಪ ರೈ ಪುತ್ರ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

532

ನ್ಯೂಸ್‌ ನಾಟೌಟ್: ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟೀಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗಲು ರಿಕ್ಕಿ ರೈ 20 ದಿನಗಳ ಕಾಲಾವಕಾಶ ಕೇಳಿದ್ದು, ಮೆಡಿಕಲ್ ರಿಪೋರ್ಟ್ ಕೊಟ್ಟು ಸಮಯಾವಕಾಶ ಕೇಳಿದ್ದಾರೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.

“ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ ಸಂಬಂಧ ಎಲ್ಲಾ ರೀತಿಯಲ್ಲೂ ತನಿಖೆ ನಡೆಯುತ್ತಿದೆ. ಕೆಲವೊಂದು ರಿಪೋರ್ಟ್‌ಗಳು ಬರಬೇಕಾಗಿದೆ, ಅದಕ್ಕಾಗಿ ಕಾಯುತ್ತಿದ್ದೇವೆ. ಈ ಎಲ್ಲಾ ವರದಿಗಳು ಬಂದ ಬಳಿಕ ಚಾರ್ಜ್‌ಶೀಟ್ ಫೈಲ್ ಮಾಡುತ್ತೇವೆ. ಜೊತೆಗೆ ರಿಕ್ಕಿ ರೈಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ. ಅವರು ಬಂದ ನಂತರ ತನಿಖೆ ಮುಂದುವರಿಸುತ್ತೇವೆ” ಎಂದು ಎಸ್ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಪ್ರಕರಣದಲ್ಲಿ ವಿಠಲ್ ಪ್ರಮುಖ ಆರೋಪಿಯಾಗಿದ್ದಾನೆ. ಆತನನ್ನು ದಸ್ತಗಿರಿ ಮಾಡಿ ಈಗಾಗಲೇ ಜೈಲಿಗೆ ಬಿಟ್ಟಿದ್ದೇವೆ. ಕೆಲವೊಂದು ಸಾಕ್ಷ್ಯಾಧಾರಗಳನ್ನು ಎಫ್‌ ಎಸ್‌ ಎಲ್‌ ಗೆ ಕಳುಹಿಸಿದ್ದೇವೆ. ಆ ವರದಿಗಳು ಬಂದ ಮೇಲೆ ಪ್ರಕರಣ ತನಿಖೆ ಚುರುಕುಗೊಳಿಸುತ್ತೇವೆ. ಸದ್ಯಕ್ಕೆ ವಿಠಲ್ ಒಬ್ಬನೇ ಕೇಸ್‌ನಲ್ಲಿ ಆರೋಪಿಯಾಗಿದ್ದಾನೆ. ರಿಕ್ಕಿ ರೈ ವಿಚಾರಣೆಗೆ ಹಾಜರಾದ ಬಳಿಕ ಮತ್ತಷ್ಟು ವಿಚಾರಗಳು ಹೊರಬರಬೇಕಿದೆ ಎಂದು ತಿಳಿಸಿದರು.‌

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಹುಟ್ಟುಹಬ್ಬಕ್ಕೆ ಮೋದಿ, ಸಿದ್ದರಾಮಯ್ಯ ಸೇರಿ ಹಲವು ಗಣ್ಯರಿಂದ ಶುಭಾಶಯ, ದೇವೇಗೌಡರ ನಿವಾಸಕ್ಕೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಭೇಟಿ

ಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢವಾಗಿ ಸಾವು..! ಪಂಜಾಬ್ ಗೆ ಪ್ರಯಾಣ ಬೆಳೆಸಿದ ಕುಟುಂಬಸ್ಥರು..!

ಭಾರತದ ಸೇನಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದ್ದ ಹರಿಯಾಣದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಅರೆಸ್ಟ್..! ದಾಳಿಗೂ ಮುಂಚೆ ಪಹಲ್ಗಾಮ್ ಗೆ ಬಂದಿದ್ದ ಜ್ಯೋತಿ..!

See also  ಧರ್ಮಸ್ಥಳದಲ್ಲಿ ಹಗಲಿನಲ್ಲೇ ಪ್ರತ್ಯಕ್ಷವಾದ ಕಾಡಾನೆಗಳ ಹಿಂಡು! ಆತಂಕದಲ್ಲಿ ಗ್ರಾಮಸ್ಥರು..! ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget