ನ್ಯೂಸ್ ನಾಟೌಟ್: ಇತ್ತೀಚೆಗೆ ಪ್ರಪಂಚದಲ್ಲಿ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿಗೆ ವಿರುದ್ಧವಾಗಿ ಹಲವು ಉದಾಹರಣೆಗಳು ಸಿಗುತ್ತಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ರಾಜಕೀಯ ಪಕ್ಷವೊಂದರ ಮುಖಂಡೆ ಎನ್ನಿಸಿಕೊಂಡವಳು ತನ್ನ ಬಾಯ್ ಫ್ರೆಂಡ್ ಹಾಗೂ ಆತನ ಸ್ನೇಹಿತನಿಂದಲೇ ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿದ್ದಾಳೆ. ಘಟನೆ ಸಂಬಂಧ ಅನಾಮಿಕಾ, ಆಕೆಯ ಬಾಯ್ ಫ್ರೆಂಡ್ ಸುಮಿತ್ ಪತ್ವಾಲ್ ಮತ್ತು ಆತನ ಸ್ನೇಹಿತ ಶುಭಂನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ಆಕೆಯನ್ನ ಪಕ್ಷದಿಂದಲೇ ವಜಾ ಮಾಡಿದೆ.
ಅನಾಮಿಕಾ ಶರ್ಮಾ 2024ರ ವರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಳು. ಆಕೆ ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದರೆ ಮಗಳು ಅಪ್ಪನೊಂದಿಗೆ ಉಳಿದುಕೊಂಡಿದ್ದಳು. ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು. ಈ ವೇಳೆ ಅನಾಮಿಕಾ, ಸುಮಿತ್ ನ ಪ್ರೇಮ ಸಂಪಾದಿಸಿ ಆತನ ಹೋಟೆಲ್ ನಲ್ಲಿಯೇ ಉಳಿದುಕೊಂಡಿದ್ದಳು. ಜನವರಿಯಿಂದ ಮಾರ್ಚ್ ವೇಳೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಮಗಳ ಮೇಲೆ ಸುಮಿತ್ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು. ಈ ವಿಷಯವನ್ನ ತಂದೆಗೆ ಹೇಳದಂತೆ ಬೆದರಿಕೆಯೂ ಹಾಕಿದ್ದಳು ಎಂದು ವರದಿಗಳಿಂದ ತಿಳಿದುಬಂದಿದೆ. ಮಗಳು ಅಪ್ಪನೊಂದಿಗಿದ್ದಾಳೆ ಎಂಬ ದ್ವೇಷದಿಂದ ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ನಡೆದ ಘಟನೆ ಬಗ್ಗೆ ಅಪ್ರಾಪ್ತೆ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಪರಿಣಾಮ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
3 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಅಪಹರಿಸಲು ಯತ್ನಿಸಿದವನ ಮೇಲೆ ಗುಂಡಿನ ದಾಳಿ..! ಆರೋಪಿ ಎನ್ ಕೌಂಟರ್ ಗೆ ಬಲಿ..!
ಆರ್ ಸಿಬಿ ವಿಜಯೋತ್ಸವದ ಅನಾಹುತಕ್ಕೆ 5 ಪೊಲೀಸರ ತಲೆದಂಡ..! ಅಧಿಕಾರಿಗಳ ಅಮಾನತ್ತಿಗೆ ಸರ್ಕಾರ ಕೊಟ್ಟ ಕಾರಣವೇನು..?