ದೇಶ-ಪ್ರಪಂಚ

ಬಸ್‌ನಲ್ಲಿ ಹೋಗೋ ಪ್ರಯಾಣಿಕರೇ ಎಚ್ಚರ..!ಮಹಿಳೆಯರನ್ನು ಮಾತ್ರ ಈ ರೀತಿ ಕರಿಲೇಬೇಡಿ,ಕಪಾಳಮೋಕ್ಷ ಗ್ಯಾರಂಟಿ..!

ನ್ಯೂಸ್ ನಾಟೌಟ್ :ಮಹಿಳೆಯರಿಗೆ ಆಂಟಿ ಅಂದ್ರೆ ಸಾಕು ಸಿಟ್ಟು ನೆತ್ತಿಗೇರುತ್ತೆ.ಅಜ್ಜಿ ಅಂದ್ರೆ ಕೇಳೋದೇ ಬೇಡ.ಕಥೆ ಮುಗೀತು. ಅಂದು ಬಾಲಿವುಡ್‌ ನಟಿ ಕತ್ರಿನಾ ಕೈಫ್ ಅವರನ್ನು ಭಜರಂಗಿ ಬಾಯಿಜಾನ್ ಚಿತ್ರದಲ್ಲಿ ನಟಿಸಿದ್ದ ಪುಟ್ಟ ಬಾಲಕಿಯೋರ್ವಳು ಆಂಟಿ ಕರೆದಿದ್ದಕ್ಕೆ ಭಾರಿ ಚರ್ಚೆಗೆ ಕಾರಣವಾಗಿತ್ತು.ನಟಿ ಕೆಂಡಾಮಂಡಲರಾಗಿದ್ದರು.ಇದೀಗ ಬಸ್‌ನಲ್ಲಿ ಬಾಲಕಿಯೋರ್ವಳು ‘ಟಿಕೆಟ್ ಕೊಡಿ ಅಜ್ಜಿ’ ಎಂದು ಕೇಳಿದ್ದಕ್ಕೆ ಕೋಪಗೊಂಡು ಮಹಿಳಾ ಕಂಡಕ್ಟರ್ ಒಬ್ಬರು ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ.

ಮಂಡ್ಯ – ಭಾರತೀನಗರ ಬಸ್‍ನಲ್ಲಿ ಬುಧವಾರ ಈ ಘಟನೆ ನಡೆದಿದೆ.ಭಾರತಿನಗರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿ ಕಾವ್ಯಶ್ರಿ ಎಂಬಾಕೆ ಟಿಕೆಟ್ ಪಡೆಯುವಾಗ ಮಹಿಳಾ ಕಂಡಕ್ಟರ್‍ ಸೌಭಾಗ್ಯ ಎಂಬುವವರಿಗೆ ‘ಅಜ್ಜಿ’ ಎಂದು ಕರೆದಿದ್ದಾಳೆ.ಇದಕ್ಕೆ ಸಿಡಿಮಿಡಿ ಗೊಂಡ ಕಂಡೆಕ್ಟರ್‌ ಕಣ್ಣು ಕೆಂಪಗಾಗಿದೆ.ಪ್ರಯಾಣಿಕರು ಹೆಚ್ಚಿದ್ದ ಕಾರಣ ಒಂದು ಕಡೆ ಕೆಲಸ ನಿರ್ವಹಿಸಬೇಕು.ಮತ್ತೊಂದೆಡೆ ಈ ಹುಡುಗಿ ಅಜ್ಜಿ ಎಂದು ಕರಿತಿದ್ದಾಳೆ.ಸಿಟ್ಟಾದ ಬಾಲಕಿ ‘ನಿನಗೆ ನಾನು ಅಜ್ಜಿಯಂತೆ ಕಾಣುತ್ತೇನಾ?’ ಅಂತಾ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದಿದ್ದಾರಂತೆ.

ಇದರಿಂದ ಮನನೊಂದ ವಿದ್ಯಾರ್ಥಿನಿ ಕಾವ್ಯಶ್ರೀ ಎಂಬಾಕೆ ಸ್ಥಳದಲ್ಲಿಯೇ ಬಸ್‍ ನಿಲ್ಲಿಸುವಂತೆ ಹೇಳಿ ನೇರವಾಗಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಸೌಭಾಗ್ಯ ವಿರುದ್ಧ ದೂರು ದಾಖಲಿಸಿದ್ದಾಳೆ.‘ಬಸ್‍ನಲ್ಲಿ ಪ್ರಯಾಣಿಕರು ಹೆಚ್ಚಿದ್ದ ಕಾರಣ ನನಗೆ ಮುಜುಗರವಾಗುವಂತೆ ವಿದ್ಯಾರ್ಥಿನಿ ನಡೆದುಕೊಂಡಿದ್ದಾಳೆ. ನನಗೆ ಅಜ್ಜಿ ಎಂದು ಕರೆಯುವ ಮೂಲಕ ಅವಮಾನ ಮಾಡಿದ್ದಾಳೆ. ಹೀಗಾಗಿ ನಾನು ಆಕೆಗೆ ಕಪಾಳಮೋಕ್ಷ ಮಾಡಿದೆ ಎಂದು ನಿರ್ವಾಹಕಿ ಸೌಭಾಗ್ಯ ತಿಳಿಸಿದ್ದಾರಂತೆ.ವಿದ್ಯಾರ್ಥಿನಿ  ಕಾವ್ಯಶ್ರೀ ಸಂಬಂಧಿಕರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಠಾಣೆಯ ಎದುರು ಬಂದು ಪ್ರತಿಭಟನೆ ನಡೆಸಿದ್ದಾರೆ.ನಿರ್ವಾಹಕಿ ಸೌಭಾಗ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

Related posts

ರ‍್ಯಾಗಿಂಗ್‌: ಬೇಸತ್ತು ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಅಂತ್ಯ !

ಟೀ ಮಾರುತ್ತಿರುವ ಉತ್ತರ ಪ್ರದೇಶ CM ಯೋಗಿ ಆದಿತ್ಯನಾಥ್ ಸಹೋದರಿ..! ಒಂದು ರಾಜ್ಯದ ಮುಖ್ಯಮಂತ್ರಿಯ ಸಹೋದರಿಗೆ ಇದೇನಿದು ಸಂಕಷ್ಟ..?

Annabhagya Yajana:ಬಂಟ್ವಾಳದಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ಕಿ ಮಾಯ ಬೆನ್ನಲ್ಲೇ ಇದೇನಿದು ಸಿಬ್ಬಂದಿಯಿಂದ ಅವ್ಯವಹಾರದ ಆರೋಪ..!,ಪ್ರತಿ ಕಾರ್ಡ್‌ನಿಂದ ಅಕ್ಕಿ ಕದ್ದು ವಂಚಿಸುತ್ತಿದ್ದಾತ ಸಿಕ್ಕಿಬಿದ್ದಿದ್ದು ಹೇಗೆ?