ಜೀವನಶೈಲಿ

ನೀವು ಚಹಾ ಪ್ರಿಯರಾ? ಟೀ ಕುಡಿದ್ರೆ ಆರೋಗ್ಯಕ್ಕೆ ಸಮಸ್ಯೆಗಳಗುತ್ತಾ?ಈ ವಸ್ತು ಬಳಸಿ ಯಾವ ಸಮಸ್ಯೆಗಳು ಕಾಡದು…

ನ್ಯೂಸ್ ನಾಟೌಟ್ : ಚಹಾ ಅಂದರೆ ಕೆಲವರಿಗೆ ಪಂಚಪ್ರಾಣ. ಅದರಲ್ಲು ಬೆಳಗ್ಗೆ ಎದ್ದು ಚಹಾ ಕುಡಿದಿಲ್ಲವೆಂದರೆ ಆ ದಿನ ಏನೋ ಕಳೆದುಕೊಂಡ ಅನುಭವ.ಅಷ್ಟೊಂದು ಎನರ್ಜಿ ಬೂಸ್ಟರ್ ಈ ಟೀ.ಆದರೆ ಇದನ್ನು ಕುಡಿಯಲು ಇಷ್ಟ, ಆರೋಗ್ಯಕ್ಕೆ ಆಗಲ್ಲ ಎನ್ನುವವರು ಈ ವರದಿಯನ್ನು ಓದಿ.ಅದಕ್ಕೆ ಸೂಪರ್ ಟಿಪ್ಸ್ ಇಲ್ಲಿದೆ..

ಜಿಂಜರ್ ಟೀ:

ಚಹಾ  ಮಾಡುವಾಗ ಅದಕ್ಕೆ ಒಂದು ತುಂಡು ಶುಂಠಿಯನ್ನು ಜಜ್ಜಿ ಸೇರಿಸಿದರೆ ಚಹಾದ ರುಚಿ ದುಪ್ಪಟ್ಟು ಆಗುವುದು . ಇದು ಆರೋಗ್ಯಕ್ಕೂ ಒಳ್ಳೆಯದು. ಶುಂಠಿ ಚಹಾ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಕಬ್ಬಿಣ, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಮುಂತಾದ ಪೋಷಕಾಂಶಗಳು ಇರುತ್ತವೆ. 

ರೋಗನಿರೋಧಕ ಶಕ್ತಿ ಹೆಚ್ಚಳ:


ಶುಂಠಿ ಚಹಾ  ರೋಗನಿರೋಧಕ ಶಕ್ತಿ  ಹೆಚ್ಚಿಸುವ ಗುಣ ಹೊಂದಿದೆ. ಶುಂಠಿಯಲ್ಲಿರುವ ಪೋಷಕಾಂಶಗಳು ರೋಗಗಳ ವಿರುದ್ಧ ಹೋರಾಡುತ್ತದೆ. ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸಲು ಕೆಲಸ ಮಾಡುತ್ತದೆ. ಶುಂಠಿ ಚಹಾ ಕುಡಿಯುವುದರಿಂದ ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ.

ರಕ್ತ ಪರಿಚಲನೆ :


ಚಳಿ ಹೆಚ್ಚಾದಾಗ ದೇಹದ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ಶುಂಠಿ ಚಹಾವನ್ನು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿ ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳಿದ್ದು, ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಆರೋಗ್ಯ ಮಟ್ಟವನ್ನು ಸುಧಾರಿಸಬಹುದು.ಆಸ್ಪತ್ರೆಗೆ ಹೋಗುವುದನ್ನೇ ತಪ್ಪಿಸುವ ಗುಣ ಇದು ಹೊಂದಿದೆ.

ಆಯಾಸ ನಿವಾರಣೆ:


ಶುಂಠಿ ಚಹಾದಲ್ಲಿರುವ ಕೆಲವು ಅಂಶಗಳು ಆಯಾಸ ನಿವಾರಿಸಲು ಸಹಾಯ ಮಾಡುತ್ತದೆ. ಈ ಟೀ ಕುಡಿಯುವುದರಿಂದ ನರಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತಲೆನೋವಿನಿಂದಲೂ ಪರಿಹಾರ ದೊರೆಯುತ್ತದೆ .

Related posts

ವಿಧವೆ ಸೊಸೆಯನ್ನು ಓದಿಸಿ ನೌಕರಿ ಸಿಕ್ಕ ಬಳಿಕ ಪುನರ್‌ ವಿವಾಹ ಮಾಡಿಸಿದ ಅತ್ತೆ..! 

ಕೇರಳದಲ್ಲಿ ‘ವೆಸ್ಟ್ ನೈಲ್’ ಜ್ವರದಿಂದ ಓರ್ವ ಮೃತ್ಯು..! ಕರ್ನಾಟಕದ ಗಡಿಭಾಗದಲ್ಲಿ ಆರೋಗ್ಯ ಇಲಾಖೆಯಿಂದ ತೀವ್ರ ಕಟ್ಟೆಚ್ಚರ..!

ಮುಟ್ಟಿನ ಗುಟ್ಟು, ಮಹಿಳೆಯರಿಗೆ ಇದು ತಿಳಿದಿರಲೇಬೇಕು, ಮೆನೋಪಾಸ್ ಹಂತದಲ್ಲಿ ಹಾರ್ಮೋನುಗಳು ಬದಲಾಗೋದು ಏಕೆ..?