ಕ್ರೈಂಸಿನಿಮಾ

ಬಾಲಿವುಡ್ ನಟಿಯ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್‌ ನೆಕ್ಲೇಸ್‌ ಕಳ್ಳತನ..! ಪ್ಲಾಟ್ ಗೆ ಪೇಯಿಂಟಿಂಗ್‌ ಕೆಲಸಕ್ಕೆ ಬಂದಿದ್ದವನಿಂದ ಕೃತ್ಯದ ಶಂಕೆ..!

ನ್ಯೂಸ್ ನಾಟೌಟ್ : ಬಾಲಿವುಡ್‌ ನಟಿ ಪೂನಂ ಧಿಲ್ಲೋನ್‌ (Poonam Dhillon) ಮನೆಯಲ್ಲಿ ಕೆಲಸಕ್ಕೆ ಬಂದಿದ್ದವನಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್‌ ಕಳ್ಳತನವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮನೆಯಲ್ಲಿ ಕೆಲಸದವನೇ ಡೈಮಂಡ್‌ ನೆಕ್ಲೇಸ್‌ ಜೊತೆಗೆ 35,000 ರೂ. ನಗದು ಹಣ ಹಾಗೂ ಕೆಲವು ಡಾಲರ್‌ ಗಳನ್ನೂ ಕದ್ದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು 37 ವರ್ಷದ ಸಮೀರ್‌ ಅನ್ಸಾರಿ ಎಂದು ಗುರುತಿಸಲಾಗಿದೆ, ಈತ ಫ್ಲಾಟ್‌ಗೆ ಪೇಯಿಂಟಿಂಗ್‌ ಕೆಲಸಕ್ಕೆ ಒಂದು ಟೀಂ ಜೊತೆಗೆ ಬಂದಿದ್ದ. ಕಳೆದ ಡಿಸೆಂಬರ್‌ 28ರಿಂದ ಇದೇ ಜನವರಿ 5ರ ವರೆಗೆ ಕೆಲಸ ಮಾಡುತ್ತಿದ್ದ. ಈ ವೇಳೆ ಹೊಂಚು ಹಾಕಿದ್ದ ಆರೋಪಿ ಮನೆಯ ಕಬೋರ್ಡ್‌ವೊಂದರಲ್ಲಿಟ್ಟಿದ್ದ ನೆಕ್ಲೇಸ್‌, ನಗದು, ಡಾಲರ್‌ ಗಳನ್ನು ಕದ್ದೊಯ್ದಿದ್ದಾನೆ ಎನ್ನಲಾಗಿದೆ.

ಸದ್ಯ ನಟಿ ಮುಂಬೈನ ಜುಹುನಲ್ಲಿ ವಾಸಿಸುತ್ತಿದ್ದಾರೆ. ಆದ್ರೆ ತನ್ನ ಫ್ಲಾಟ್‌ನಲ್ಲಿ ಕೆಲಸ ನಡೆಯುತ್ತಿದ್ದ ಕಾರಣ, ತನ್ನ ಮಗ ಅನ್ಮೋಲ್‌ ವಾಸಿಸುವ ʻಖಾರ್‌ʼ ನಿವಾಸದಲ್ಲಿ ಉಳಿದುಕೊಂಡಿದ್ದರು. ಇದೇ ಮನೆಯಲ್ಲಿ ಕೆಲಸದವರಿಗೂ ಉಳಿಯಲು ಅವಕಾಶ ಮಾಡಿಕೊಡಲಾಗಿತ್ತು. ಇದರ ಲಾಭ ಪಡೆದ ಖತರ್ನಾಕ್‌ ಹಣ, ಒಡವೆ ದೋಚಿದ್ದಾನೆ. ಆರೋಪಿ ಅನ್ಸಾರಿ ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ಪಾರ್ಟಿಗೆ ಖರ್ಚು ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Click

https://newsnotout.com/2025/01/isro-narayanan-appointeed-as-space-secretory-as-well-as-chief/
https://newsnotout.com/2025/01/hmpv-viras-issue-health-department-kannada-news-d/
https://newsnotout.com/2025/01/udupi-fish-theft-kannada-news-at-night-viral-news/

Related posts

ಸುಳ್ಯ: ಕೆಲಸಕ್ಕೆಂದು ಬಂದವ ಮೊಬೈಲ್ ಮತ್ತು ಬೈಕ್‌ ಕದ್ದು ಪರಾರಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕೈಗೆ ತೆಂಗಿನಕಾಯಿ ಎಸೆದ ಮಂಗ..! ಕೈ ಮೂಳೆ ಮುರಿತ, ಆಸ್ಪತ್ರೆಗೆ ದಾಖಲು

ವಸತಿ ಶಾಲೆಯಲ್ಲಿ ಅಡುಗೆ ಸಹಾಯಕನಿಂದ ಮಕ್ಕಳಿಗೆ ಲೈಂಗಿಕ ಕಿರುಕುಳ..! ಮಕ್ಕಳ ಸಲಹಾ ಪೆಟ್ಟಿಗೆಯಲ್ಲಿ ಸಿಕ್ಕಿದ ಹಲವು ದೂರಿನ ಪತ್ರಗಳು..!