ವೈರಲ್ ನ್ಯೂಸ್

ನಿಗೂಢವಾಗಿದ್ದ ಕನ್ನಡ ನಟಿ ಶಬರಿಮಲೆಯಲ್ಲಿ ಪ್ರತ್ಯಕ್ಷ..! ಐವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಈ ನಟಿ ಇಷ್ಟು ದಿನ ಕಾಣಿಸಿಕೊಂಡಿಲ್ಲ ಏಕೆ?

289

ನ್ಯೂಸ್ ನಾಟೌಟ್: ಹಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕಾಣಿಸಿಕೊಂಡಿರದ ಖ್ಯಾತ ನಟಿ ಹಾಲುಂಡ ತವರು ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಸಿತಾರಾ, ದೇಶದಲ್ಲಿ ಇದ್ದರಾ ಅಥವಾ ವಿದೇಶದಲ್ಲಿ ನೆಲೆಯೂರಿದ್ದರಾ ಎನ್ನುವ ಕುರಿತೂ ಮಾಹಿತಿಯೂ ಇರಲಿಲ್ಲ. ಇದೀಗ ಏಕಾಏಕಿ ಶಬರಿಮಲೆಯಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಚಿರಂಜೀವಿ ಸರ್ಜಾ ನಟನೆಯ ‘ಅಮ್ಮ ಐ ಲವ್ ಯೂ’ ಚಿತ್ರದ ನಂತರ ಬಹುತೇಕ ಚಿತ್ರರಂಗದಿಂದಲೇ ದೂರವಿದ್ದ ಸಿತಾರಾಗೆ ಶಬರಿಮಲೆಗೆ ಹೋಗಬೇಕು ಎನ್ನುವ ಸಂಕಲ್ಪವಿತ್ತು ಎಂದು ಹೇಳಲಾಗುತ್ತಿದೆ. ಅದನ್ನು ಈಗ ಪೂರೈಸಿದ್ದಾರೆ. ಹಲವು ಮಹಿಳೆಯರ ಜೊತೆ ಶಬರಿಮಲೆಗೆ ಬಂದಿದ್ದ ಸಿತಾರಾ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಅವರದ್ದು.

ಕಾರ್ತಿಕ ಮಾಸದ ಆರಂಭದ ದಿನಗಳಲ್ಲಿ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಹಾಗಾಗಿ ಇದೇ ಸಂದರ್ಭದಲ್ಲಿ ಸಿತಾರಾ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರೊಂದಿಗೆ ಶಬರಿಮಲೆಗೆ ಬಂದಿದ್ದ ಅವರು, ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

See also  SSLC ಪರೀಕ್ಷೆಯಲ್ಲಿ ಫೇಲ್ ಎಂದು ನೇಣಿಗೆ ಶರಣಾದ ವಿದ್ಯಾರ್ಥಿನಿ..! ಆದ್ರೆ ಆಕೆ ಪಾಸ್ ಆಗಿದ್ದಳು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget