ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

‘ಕಣ್ಮಣಿ ಅನ್ಬೋಡು’ ಹಾಡು ಅನಧಿಕೃತವಾಗಿ ಬಳಸಿದ್ದಕ್ಕೆ 2 ಕೋಟಿ ರೂ. ಡಿಮ್ಯಾಂಡ್ ಮಾಡಿದ ಇಳಯರಾಜ..! 60 ಲಕ್ಷ ರೂ. ನೀಡಿದ ‘ಮಂಜುಮ್ಮೆಲ್ ಬಾಯ್ಸ್’..!

ನ್ಯೂಸ್ ನಾಟೌಟ್: ಅನಧಿಕೃತವಾಗಿ ಹಾಡು ಬಳಸಿದಕ್ಕೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡ ಇದೀಗ ಇಳಯರಾಜಗೆ 60 ಲಕ್ಷ ರೂ. ಪರಿಹಾರ ನೀಡಿದ ಘಟನೆ ನಡೆದಿದೆ.

ಇಳಯರಾಜ (Ilaiyaraaja) ಸಂಗೀತ ಸಂಯೋಜನೆಯ ‘ಕಣ್ಮಣಿ’ ಹಾಡನ್ನು ಬಳಸಿದಕ್ಕೆ ಇದೀಗ ದುಬಾರಿ ಹಣವನ್ನು ದಂಡ ತೆತ್ತಿದ್ದಾರೆ. ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದಲ್ಲಿ ಅನಧಿಕೃತವಾಗಿ ಹಾಡು ಬಳಸಿದ ಹಿನ್ನೆಲೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಇಳಯರಾಜ ಕೇಳಿದ್ದರು. ಬಳಿಕ ಅವರನ್ನು ಚಿತ್ರದ ನಿರ್ಮಾಪಕರು ವೈಯಕ್ತಿಕವಾಗಿ ಭೇಟಿಯಾಗಿ ಮಾತಕತೆಯ ಬಳಿಕ ಒಪ್ಪಂದದಂತೆ 60 ಲಕ್ಷ ರೂ. ಇಳಯರಾಜಗೆ ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ.

ಅಂದಹಾಗೆ, ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ ಅನ್ಬೋಡು’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ತಂಡ ಅನುಮತಿ ಇಲ್ಲದೇ ಚಿತ್ರದಲ್ಲಿ ಬಳಸಿದ್ದರು. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಇಳಯರಾಜ ನೋಟಿಸ್ ನೀಡಿದ್ದರು.

Click

https://newsnotout.com/2024/08/kodagu-family-are-re-located-kannada-news-landslide-fear/
https://newsnotout.com/2024/08/airplane-kannada-news-viral-issue-emergency-landing/

https://newsnotout.com/2024/08/wayanad-kannada-news-first-person-who-called-emergency-call-about-incident/ https://newsnotout.com/2024/08/pilgrims-kannada-news-current-shock-kannada-news-police-investigation/             

Related posts

ಖ್ಯಾತ ಕಿರುತೆರೆ ನಟನ ವಿರುದ್ಧ ಎಫ್‌.ಐ.ಆರ್‌ ದಾಖಲು..! ಖಾಸಗಿ ವಾಹಿನಿಯ ಅವಾರ್ಡ್‌ ಕಾರ್ಯಕ್ರಮದಲ್ಲಿ ನಡೆದ ಅಚಾತುರ್ಯವೇನು..?

ಸುಳ್ಯ: ಅತಿಯಾದ ವೇಗದಿಂದ ಕಾರು ದನಕ್ಕೆ ಗುದ್ದಿ ಪರಾರಿ! ಸ್ಥಳದಲ್ಲೇ ಅಸುನೀಗಿದ ಗೋವು!

3 ವರ್ಷದ ಮಗು ನೀರಿನ ತೊಟ್ಟಿಗೆ ಬಿದ್ದು ದುರಂತ ಅಂತ್ಯ..! ಮನೆಯವರೆಲ್ಲ ನಮಾಜ್‌ ಮಾಡುತ್ತಿದ್ದ ವೇಳೆ ದುರ್ಘಟನೆ..!