ಕರಾವಳಿ

ಕಾಣಿಯೂರು: ಜವುಳಿ ವ್ಯಾಪಾರಿಗಳಿಗೆ ಹಲ್ಲೆ, 17 ಮಂದಿ ವಶಕ್ಕೆ

ನ್ಯೂಸ್ ನಾಟೌಟ್ : ಇಬ್ಬರು ಜವಳಿ ವ್ಯಾಪಾರಿಗಳಿಗೆ ಗುಂಪೊಂದು ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಇದೀಗ ಬೆಳ್ಳಾರೆ ಪೊಲೀಸರು 17 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲ್ಲೂಕಿನ ಅಡ್ಡೂರು ನಿವಾಸಿಗಳಾದ ರಮೀಝುದ್ದೀನ್ ಮತ್ತು ರಫೀಕ್ ಎಂಬುವವರನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಮನೆಗೆ ನುಗ್ಗಿ ಮಹಿಳೆಯೊಬ್ಬಳನ್ನು ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ 50 ಮಂದಿಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ದುಷ್ಕರ್ಮಿಗಳು ಇಬ್ಬರಿಗೂ 2 ಗಂಟೆಗಳ ಕಾಲ ನಿರಂತರವಾಗಿ ಥಳಿಸಿದ್ದರು ಮತ್ತು ಇಬ್ಬರ ಮೇಲೆ ಬೈಕ್ ಹತ್ತಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

Related posts

ಕಾಂಗ್ರೆಸ್ ಗ್ಯಾರಂಟಿ: ಜುಲೈ ತಿಂಗಳಲ್ಲಿ ಅಕ್ಕಿ ಸಿಗುವುದು ಅನುಮಾನ, ಗೃಹ ಲಕ್ಷ್ಮೀ ಜ್ಯೋತಿಯೂ ವಿಳಂಬ..! ವಿಳಂಬಕ್ಕೆ ಕಾರಣವೇನು?

ಕೊಲ್ಕತ್ತದಲ್ಲೂ ಏನಿದು ಕರಾವಳಿಯ ಕಾಂತಾರ ದುರ್ಗಾ ಪೂಜೆ? ತುಳುನಾಡ ಪಂಜುರ್ಲಿ ದೈವದ ಮೂರ್ತಿಗೆ ಪೂಜೆ!

ಸುಳ್ಯ: ವಿದ್ಯಾರ್ಥಿನಿ ಅನಾರೋಗ್ಯದಿಂದ ಹಠಾತ್‌ ಕೊನೆಯುಸಿರು,ಆಗಿದ್ದೇನು?