ಕ್ರೀಡೆ/ಸಿನಿಮಾಕ್ರೈಂರಾಜಕೀಯವೈರಲ್ ನ್ಯೂಸ್

ಇಸ್ರೇಲ್ ರಾಯಭಾರಿಯನ್ನು ಭೇಟಿಯಾದದ್ದೇಕೆ ನಟಿ ಕಂಗನಾ ರಣಾವತ್? ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ಹೇಳಿದ್ದೇನು?

298

ನ್ಯೂಸ್ ನಾಟೌಟ್: ಇಸ್ರೇಲ್ ರಾಯಭಾರಿ ನೌರ್ ಗಿಲೋನ್ (Naor Gilon)ಯನ್ನು ನಟಿ ಕಂಗನಾ ರಣಾವತ್ (Kangana Ranaut) ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ (Israel Embassy) ಭೇಟಿಯಾಗಿ ಇಸ್ರೇಲ್ (Israel) ಹಮಾಸ್ (Hamas) ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಭೇಟಿ ಬಳಿಕ ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಿನ್ನೆ (ಮಂಗಳವಾರ) ನಾನು ರಾವಣ ದಹನಕ್ಕಾಗಿ ದೆಹಲಿಗೆ ಬಂದಿದ್ದೆ. ಈ ಸಮಯದಲ್ಲಿ ಇಂದಿನ ಆಧುನಿಕ ರಾವಣ ಮತ್ತು ಹಮಾಸ್‌ನಂತಹ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಜನರನ್ನು ಭೇಟಿಯಾಗಬೇಕೆಂದು ನನಗೆ ಅನಿಸಿತು. ಈ ಹಿನ್ನಲೆ ಇಸ್ರೇಲ್ ರಾಯಭಾರ ಕಚೇರಿಗೆ ಭೇಟಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಮಾಸ್ ಮಾಡುತ್ತಿರುವ ಕೃತ್ಯ ಖಂಡನೀಯ. ಭಯೋತ್ಪಾದನೆ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್ ಜಯಶಾಲಿಯಾಗಲಿದೆ ಎಂಬ ಸಂಪೂರ್ಣ ಭರವಸೆ ನನಗಿದೆ. ಭಾರತದ ಸ್ವಾವಲಂಬಿ ಯುದ್ಧ ವಿಮಾನ ತೇಜಸ್ ಮತ್ತು ನನ್ನ ಮುಂಬರುವ ಚಿತ್ರ ತೇಜಸ್ ಬಗ್ಗೆ ನಾನು ಅವರೊಂದಿಗೆ ಚರ್ಚಿಸಿದೆ ಎಂದು ಹೇಳಿದ್ದಾರೆ.

ತೇಜಸ್‌ನಲ್ಲಿ ಕಂಗನಾ ರಣಾವತ್ ಭಯೋತ್ಪಾದನೆಯ ವಿರುದ್ಧ ಹೋರಾಡುವ ಕಾರ್ಯಾಚರಣೆಯಲ್ಲಿರುವ ವಾಯುಪಡೆಯ ಪೈಲಟ್‌ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ ಕಂಗನಾ ತನ್ನ ಚಲನಚಿತ್ರಕ್ಕಾಗಿ ಭಾರತೀಯ ಪಡೆಗಳು ಬಳಸಿದ ವಿಶೇಷ ಯುದ್ಧ ತಂತ್ರಗಳನ್ನು ಕರಗತ ಮಾಡಿಕೊಳ್ಳಲು ಕಠಿಣ ತರಬೇತಿಗಾಗಿ 4 ತಿಂಗಳುಗಳನ್ನು ಮೀಸಲಿಟ್ಟಿದ್ದಾರೆ ಎನ್ನಲಾಗಿದೆ.

See also  ನೋಟ್ಸ್ ನೀಡಲು ಮನೆಗೆ ಬಂದಿದ್ದ ಬಾಲಕಿ ಮೇಲೆ ಎರಗಿದ ಕಾಮುಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget