ಕ್ರೈಂರಾಜಕೀಯವಿಡಿಯೋವೈರಲ್ ನ್ಯೂಸ್ಸಿನಿಮಾ

ನಟಿ ಕಂಗನಾಗೆ ಕೊಲೆ ಬೆದರಿಕೆ..! ಇಂದಿರಾ ಗಾಂಧಿಯಾಗಿ ನಟಿಸಿರುವ ಸಂಸದೆಗೆ ಭಾರೀ ವಿರೋಧ..! ಇಲ್ಲಿದೆ ವಿಡಿಯೋ

231

ನ್ಯೂಸ್ ನಾಟೌಟ್: ನಟಿ, ಸಂಸದೆ ಕಂಗನಾ ರನೌತ್ ಇದೀಗ ತಮ್ಮ ಸಿನಿಮಾದ ಕಾರಣಕ್ಕೆ ಕೊಲೆ ಬೆದರಿಕೆ ಎದುರಿಸುತ್ತಿದ್ದಾರೆ. ಕಂಗನಾ ರನೌತ್, ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಆದರೆ ಸಿನಿಮಾ ಬಿಡುಗಡೆ ಮಾಡಬಾರದೆಂದು ಕೆಲವರು ಒತ್ತಾಯ ಮಾಡಿದ್ದು, ಕೊಲೆ ಬೆದರಿಕೆಗಳು ಸಹ ಬಂದಿವೆ.

ನಟಿ ಕಂಗನಾ ಸ್ವತಃ ಈ ಕೊಲೆ ಬೆದರಿಕೆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಸಿಖ್ ಸಮುದಾಯದ ಕೆಲ ವ್ಯಕ್ತಿಗಳು ಕೋಣೆಯೊಂದರಲ್ಲಿ ಕುಳಿತು ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಕಂಗನಾರನ್ನು ಉದ್ದೇಶಿಸಿ ಮಾತನಾಡಿರುವ ಒಬ್ಬ ವ್ಯಕ್ತಿ, ‘ಒಂದೊಮ್ಮೆ ನೀನು ಈ ಸಿನಿಮಾ ಬಿಡುಗಡೆ ಮಾಡಿದರೆ ಪಂಜಾಬಿಯರಿಂದ ಹೇಗಾದರೂ ಚಪ್ಪಲಿಯಲ್ಲಿ ಹೊಡೆತ ತಿಂದೇ ತಿನ್ನುತ್ತೀಯ ಮಾತ್ರವಲ್ಲದೆ, ಕ್ರಿಶ್ಚಿಯನ್, ಮುಸ್ಲಿಂ ಇತರೆ ಹಿಂದೂಗಳು ಸಹ ನಿನ್ನನ್ನು ಚಪ್ಪಲಿಯಿಂದ ಸ್ವಾಗತ ಮಾಡಲಿದ್ದಾರೆ’ ಎಂದಿದ್ದಾರೆ.

ಅದೇ ವಿಡಿಯೋನಲ್ಲಿ ಇನ್ನೊಬ್ಬ ಪಂಜಾಬಿ ವ್ಯಕ್ತಿ ಮಾತನಾಡಿ, ‘ಸಿನಿಮಾದಲ್ಲಿ ಒಂದೊಮ್ಮೆ ಜರ್ನಲ್ ಸಿಂಗ್ ಬಿಂದಾರ್ನ್​ವಾಲೆ ಅವರನ್ನು ಭಯೋತ್ಪಾದಕ ಎಂದು ನೀನು ತೋರಿಸಿದ್ದರೆ, ನೆನಪಿರಲಿ, ನೀನು ಯಾರ ಬಗ್ಗೆ ಸಿನಿಮಾ ಮಾಡುತ್ತಿದ್ದೀಯೋ ಅವರ ಗತಿ ಏನಾಯ್ತು ಎಂಬುದು (ಇಂದಿರಾ ಗಾಂಧಿ) ಅದೇ ಗತಿ ನಿನಗೂ ಆಗುತ್ತದೆ. ಅವರಿಗಾಗಿ ನಾವು ತಲೆ ಕಡಿಸಿಕೊಳ್ಳಲು ತಯಾರಿದ್ದೀವಿ ಹಾಗೆಯೇ ತಲೆ ಕಡಿಯಲು ಸಹ ತಯಾರಾಗುತ್ತೀವಿ’ ಎಂದಿದ್ದಾರೆ. ವಿಡಿಯೋನಲ್ಲಿ ನಟ, ರಾಜಕಾರಣಿ ಏಜಾಜ್ ಖಾನ್ ಸಹ ಇದ್ದಾರೆ. ಆದರೆ ಅವರು ಈ ಬಗ್ಗೆ ಏನೂ ಮಾತನಾಡಿಲ್ಲ ಎನ್ನಲಾಗಿದೆ.

See also  ಬಾಗಿಲಲ್ಲೇ ಕಾದು ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ..! ಮನೆಯೊಳಗೆ ನೇಣಿಗೆ ಶರಣಾದ ಮಹಿಳೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget