ಕ್ರೈಂರಾಜಕೀಯವೈರಲ್ ನ್ಯೂಸ್ಸಿನಿಮಾ

ಕಂಗನಾ ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಚಿತ್ರ ಬ್ಯಾನ್ ಆಗುತ್ತಾ..! ಇಂದಿರಾ ಗಾಂಧಿ ಇತಿಹಾಸವನ್ನು ತಪ್ಪಾಗಿ ತೋರಿಸಲಾಗಿದೆಯಾ..?

ನ್ಯೂಸ್ ನಾಟೌಟ್: ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಸಿನಿಮಾದ ಟ್ರೇಲರ್ ವಾರದ ಹಿಂದಷ್ಟೇ ರಿಲೀಸ್ ಆಗಿತ್ತು. ಈ ಬೆನ್ನಲ್ಲೇ ಸಿನಿಮಾ ವಿವಾದ ಮೂಡುವ ಸೂಚನೆ ನೀಡಿತ್ತು. ಈಗ ಸಿನಿಮಾ ಮೇಲೆ ಬ್ಯಾನ್ ಹೇರುವಂತೆ ಅಕಲಾ ತಕ್ತ್ ಹಾಗೂ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ (ಎಸ್​ಜಿಪಿಸಿ) ಒತ್ತಾಯ ಮಾಡಿದೆ.

ಸಿಖ್ ವ್ಯಕ್ತಿಗಳನ್ನು ತಪ್ಪಾಗಿ ತೋರಿಸಲಾಗಿದೆ ಮತ್ತು ಸಮುದಾಯದ ಇತಿಹಾಸವನ್ನು ಅಗೌರವಿಸುವ ಕೆಲಸ ಆಗಿದೆ ಎಂದು ಸಮಿತಿಯವರು ದೂರಿದ್ದಾರೆ. ಎಸ್​ಜಿಪಿಸಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಮಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಎಮರ್ಜೆನ್ಸಿ ಸಿನಿಮಾ ಸಿಖ್ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ. ಸಿಖ್ ಸಮುದಾಯದವರಿಗೆ ಮಸಿ ಬಳಿಯುವ ಕೆಲಸ ಆಗಿದೆ. ಜರ್ನೈಲ್ ಸಿಂಗ್ ಬಿಂದ್ರನ್​ವಾಲೆ ಅವರನ್ನು ನಾವು ಹುತಾತ್ಮ ಎಂದು ಪರಿಗಣಿಸಿದ್ದೇವೆ’ ಎಂಬುದಾಗಿ ಮಾತನಾಡಿದ್ದಾರೆ.

1975ರಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಇದನ್ನು ಆಧರಿಸಿ ಕಂಗನಾ ಸಿನಿಮಾ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಜಕೀಯ ಜೀವನ, ಅವರು ಎದುರಿಸಿದ ಸವಾಲುಗಳನ್ನು ತೋರಿಸಲಾಗಿದೆ. ಈ ಟ್ರೇಲರ್​ನ ಸಿಖ್ ಸಮುದಾಯವರು ಇಷ್ಟಪಟ್ಟಿಲ್ಲ. ಈಗಾಗಲೇ ಎಸ್​ಜಿಪಿಸಿ ಅವರು ಕಂಗನಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅವರ ವಿರುದ್ಧ ಎಫ್​ಐಆರ್ ದಾಖಲಿಸಲು ಆಗ್ರಹಿಸಲಾಗಿದೆ. ಈ ಸಿನಿಮಾ ಸೆಪ್ಟೆಂಬರ್ 6ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

Click

https://newsnotout.com/2024/08/bharath-shetty-get-fired-on-ivan-disoza-kannada-news-about-allegations/
https://newsnotout.com/2024/08/mangaluru-ivan-desoza-governer-house-stone-thrown/
https://newsnotout.com/2024/08/nivedhita-gowda-chandan-2-marriage-issue-blue-saree-kananda-news/
https://newsnotout.com/2024/08/bengal-tiger-tiger-women-viral-video-kannada-news-america/
https://newsnotout.com/2024/08/school-bus-under-fire-by-protester-kannada-news-viral-video-police-fir/
https://newsnotout.com/2024/08/shinde-house-demolish-by-people-kannada-news-viral-72-membars-under-custody/

Related posts

ಮರ್ಕಂಜ: ಸೇವಾಜೆಯ ಅಜ್ಜ ನಾಪತ್ತೆ ಪ್ರಕರಣಕ್ಕೆ ಜ್ಯೋತಿಷ್ಯನ ಟ್ವಿಸ್ಟ್..!, ಕಾಡಿನೊಳಗಿನ ನಿಗೂಢ ಮನೆಯಲ್ಲಿ ಹುಡುಕಲು ಹೋದವರಿಗೆ ಸಿಕ್ಕಿದ್ದೇನು..?

ಟೀ ಕೊಡಲಿಲ್ಲವೆಂದು ಸರ್ಜರಿ ಅರ್ಧದಲ್ಲೇ ಬಿಟ್ಟು ಹೊರ ನಡೆದರಾ ಆ ವೈದ್ಯ..? ಅನಸ್ತೇಷಿಯಾ ನೀಡಿದ್ದ ಆ ನಾಲ್ಕು ಮಹಿಳೆಯರಿಗೇನಾಯ್ತು..? ಸರ್ಕಾರಿ ಆಸ್ಪತ್ರೆಯಲ್ಲಿ ಅಂದು ನಡೆದದ್ದಾದರೂ ಏನು?

ರತನ್ ಟಾಟಾ ಕುಟುಂಬಕ್ಕೆ ನನ್ನ ಸಂತಾಪ ತಿಳಿಸಿ ಎಂದು ಮೋದಿಗೆ ಮನವಿ ಮಾಡಿದ ಇಸ್ರೇಲ್ ಪ್ರಧಾನಿ, ಭಾರತದ ಹೆಮ್ಮೆಯ ಪುತ್ರ ರತನ್ ಟಾಟಾ ಎಂದ ಬೆಂಜಮಿನ್ ನೆತನ್ಯಾಹು