Latestಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಕನ್ನಡ ಸೀರಿಯಲ್ ನಟನ ವಿರುದ್ಧ ಮತ್ತೊಂದು ಕೇಸ್..! ಸುಲಿಗೆ, ಲೈಂಗಿಕ ಕಿರುಕುಳ ಆರೋಪ..!

627

ನ್ಯೂಸ್ ನಾಟೌಟ್: ನಟ ಚರಿತ್ ಬಾಲಪ್ಪ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಸುಲಿಗೆ, ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ಕಿರುತೆರೆ ನಟ ಚರಿತ್ ಬಾಲಪ್ಪ ಅಲಿಯಾಸ್ ಧ್ರುವಂತ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬ್ಲಾಕ್‌ ಮೇಲ್ ಮಾಡಿ ಹಣ ಸುಲಿಗೆ, ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ನೀಡಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಚರಿತ್ ಬಾಲಪ್ಪ ನಾಪತ್ತೆಯಾಗಿದ್ದಾರೆ. ಈ ಹಿಂದೆಯೂ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ನಟ ಜೈಲು ಸೇರಿದ್ದರು.

ಸೀರಿಯಲ್ ಶೂಟಿಂಗ್ ನೋಡಲು ಹೋದಾಗ ಸಂತ್ರಸ್ತೆಗೆ ಚರಿತ್ ಪರಿಚಯವಾಗಿತ್ತು. ಬಳಿಕ ಚರಿತ್ ಒತ್ತಾಯದ ಮೇರೆಗೆ ಇಬ್ಬರ ನಡುವೆ ಪ್ರೀತಿ ಶುರುವಾಯಿತು. ಬಳಿಕ ಸಂತ್ರಸ್ತೆ ಬಿಟ್ಟು ಚರಿತ್ ಬೇರೆಯವರ ಮದುವೆಯಾಗಿದ್ದ. ಮದುವೆಯಾಗಿದ್ದರೂ ದೈಹಿಕ ಸಂಪರ್ಕ ಇಟ್ಟುಕೊಳ್ಳಲು ಸಂತ್ರಸ್ತೆಗೆ ಒತ್ತಾಯ ಮಾಡಿದ್ದ ಎನ್ನಲಾಗಿದೆ. ನಿರಾಕರಿಸಿದಾಗ ಸಂತ್ರಸ್ತೆ ಮನೆ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಗಲಾಟೆ ಮಾಡಿದ್ದ. ಪೊಲೀಸರಿಗೆ ದೂರು ನೀಡಿದ ಬಳಿಕ 2 ವರ್ಷ ಸುಮ್ಮನಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

2022ರಲ್ಲಿ ಪತ್ನಿಯಿಂದ ನಟ ವಿಚ್ಛೇದನ ಪಡೆದಿದ್ದ. ಬಳಿಕ ಸಂತ್ರಸ್ತೆಗೆ ಪ್ರೀತಿಸುವಂತೆ, ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಬಲವಂತ ಮಾಡಿದ್ದ. ಒಪ್ಪದ ಕಾರಣ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದ. ಖಾಸಗಿ ಫೋಟೋ ಶೇರ್ ಮಾಡುವುದಾಗಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ. ಹಣ, 4-5 ಕೆಜಿ ಬೆಳ್ಳಿ, 23 ಕಂಚಿ ರೇಷ್ಮೆ ಸೀರೆ ಪಡೆದಿದ್ದ. ಪದೇ ಪದೆ ಬ್ಲ್ಯಾಕ್‌ಮೇಲ್‌ನಿಂದ ನೊಂದು ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ ಎನ್ನಲಾಗಿದೆ.

 

Click 👇🏻

ಸಿಎಂ ಕಚೇರಿಯ ‘ಕಚೇರಿ ಟಿಪ್ಪಣಿ’ ನಕಲು ಪ್ರಕರಣ..! ಹಲವಾರು ಎಂ.ಎಲ್‌.ಎಗಳ ಬಳಿ ಪಿಎ ಆಗಿದ್ದವ ಅರೆಸ್ಟ್..!

ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಸಾವು..! ಮೋದಿ ಸಂತಾಪ

ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!

ನಾಣ್ಯಗಳಿಂದ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ..! ವಿಡಿಯೋ ವೈರಲ್

See also  ಅನುದಾನ ಬಿಡುಗಡೆಗೂ ಸಚಿವರಿಗೆ ಲಂಚ ನೀಡಬೇಕೆ..? ಸ್ವಪಕ್ಷಿಯ ಶಾಸಕ ಸಿಎಂಗೆ ಬರೆದ ಪತ್ರದಲ್ಲೇನಿದೆ?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget