Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಭೀಕರ ಹೊಡೆದಾಟಕ್ಕೆ ಮೇಲ್ಛಾವಣಿಯೇ ಕುಸಿದು ಬಿತ್ತು..! ವಿಡಿಯೋ ವೈರಲ್

550
Spread the love

ನ್ಯೂಸ್ ನಾಟೌಟ್: ಕೆಲವೊಮ್ಮೆ ಕೋಪದ ಕೈಗೆ ಬುದ್ಧಿಕೊಟ್ಟು ನಾವು ಏನು ಮಾಡುತ್ತೇವೆ ಅನ್ನೋದ್ದನ್ನು ಮರೆತೇ ಬಿಡುತ್ತಾರೆ. ಈ ರೀತಿ ಜಗಳ ಮಾಡಲು ಹೋಗಿ ಅವಾಂತರಗಳನ್ನು ಮಾಡಿಕೊಳ್ಳುವವರು ಇದ್ದಾರೆ. ಇದೀಗ ವೈರಲ್ ವಿಡಿಯೋ (video) ದಲ್ಲಿ ನೆರಹೊರೆಯ ಎರಡು ಮನೆಯ ಸದಸ್ಯರ ನಡುವೆ ಭೀಕರ ಜಗಳವು ಏರ್ಪಟ್ಟಿದೆ. ಆದರೆ ಈ ಕಾಳಗದ ನಡುವೆ ಮನೆಯ ಮೇಲ್ಛಾವಣಿ (roof) ಯೇ ಕುಸಿದು ಬಿದ್ದಿದ್ದು, ಇದರ ಪರಿಣಾಮ ನಿಂತಿದ್ದ ಜನರು ಕೂಡ ದೊಪ್ಪನೆ ಕೆಳಗೆ ಬಿದ್ದಿದ್ದಾರೆ.

ಈ ಘಟನೆಯೂ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿ ಯೋವನ್ನು @gharkekalesh ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಗಲಭೆಯ ವೇಳೆ ಜನರು ಮನೆಯ ಛಾವಣಿಯಿಂದ ಕೆಳಗೆ ಬಿದ್ದ ಘಟನೆಯೂ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಈ ವಿಡಿಯೋದಲ್ಲಿ ಏಳರಿಂದ ಎಂಟು ಜನರು ಮನೆಯ ಮೇಲ್ಛಾವಣಿಯ ಮೇಲೆ ನಿಂತು ಜಗಳವಾಡುತ್ತಿದ್ದಾರೆ. ಅಲ್ಲೇ ಇದ್ದ ಮಹಿಳೆಯರು ಕೂಡ ಪುರುಷರ ಕಾಲರ್ ಹಿಡಿದು ಎಳೆದಾಡುತ್ತಿದ್ದಾರೆ. ಈ ಹೊಡೆದಾಟ ವೇಳೆ ಮೇಲ್ಛಾವಣಿಯೇ ಕುಸಿದು ಬಿದ್ದ ಪರಿಣಾಮ ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಜಗಳವೇ ನಿಂತು ಹೋಗಿದೆ.

 

See also  ಅರಂತೋಡು: ಬೈಕ್ -ಕಾರು ನಡುವೆ ಡಿಕ್ಕಿ, ಸವಾರರಿಗೆ ಗಂಭೀರ ಗಾಯ
  Ad Widget   Ad Widget   Ad Widget   Ad Widget   Ad Widget   Ad Widget