Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ನಾನು ಶುಕ್ರ ದೇವತೆ ಎಂದು ಕಿರುಚುತ್ತಾ ನಗ್ನಳಾಗಿ ವಿಮಾನ ನಿಲ್ದಾಣದಲ್ಲಿ ಓಡಾಡಿದ ಮಹಿಳೆ..! ಭದ್ರತಾ ಸಿಬ್ಬಂದಿಗಳಿಗೆ ಪೆನ್ಸಿಲ್ ನಿಂದ ಇರಿದು, ಮ್ಯಾನೇಜರ್ ಗೆ ಕಚ್ಚಿ ಹುಚ್ಚಾಟ..!

837

ನ್ಯೂಸ್‌ ನಾಟೌಟ್: ಓರ್ವ ಮಹಿಳೆ ಪೂರ್ಣ ನಗ್ನಳಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ್ದಾಳೆ. ಬೆತ್ತಲಾಗಿ ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ, ಎಲ್ಲರ ಮೇಲೆ ನೀರೆರಚುತ್ತಾ ಅಸಭ್ಯ ವರ್ತನೆಯನ್ನು ತೋರಿದ್ದಾಳೆ. ಅಷ್ಟೇ ಅಲ್ಲದೆ ಆಕೆಯನ್ನು ನಿಯಂತ್ರಿಸಲು ಬಂದ ಭದ್ರತಾ ಸಿಬ್ಬಂದಿಗಳ ಮೇಲೆ ಆಕೆ ಹಲ್ಲೆ ನಡೆಸಿದ್ದು, ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಮೆರಿಕದ ಟೆಕ್ಸಾಸ್‌ ನಲ್ಲಿರುವ ಡಲ್ಲಾಸ್ ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬಟ್ಟೆ ಬಿಚ್ಚಿ ಬೆತ್ತಲಾದ ಮಹಿಳೆ ಹಿಂಸಾತ್ಮಕವಾಗಿ ವರ್ತಿಸಿದ್ದಾಳೆ. ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ ಭದ್ರತಾ ಸಿಬ್ಬಂದಿಗಳಿಗೆ ಪೆನ್ಸಿಲ್‌ ನಿಂದ ಇರಿದು, ರೆಸ್ಟೋರೆಂಟ್‌ ಸಿಬ್ಬಂದಿಗೆ ಕಚ್ಚಿ ರಾದ್ಧಾಂತ ಸೃಷ್ಟಿಸಿದ್ದಾಳೆ.

ಮಾರ್ಚ್ 14 ರಂದು ಈ ಘಟನೆ ನಡೆದಿದ್ದು ತಡವಾಗಿ ವೈರಲ್ ಆಗಿದೆ, ಸಮಂತಾ ಪಾಲ್ಮಾ ಎಂದು ಗುರುತಿಸಲ್ಪಟ್ಟ ಮಹಿಳೆ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿಗಳಿಗೆ ಪೆನ್ಸಿಲ್‌ನಿಂದ ಇರಿದು, ರೆಸ್ಟೋರೆಂಟ್ ಮ್ಯಾನೇಜರ್‌ ಗೆ ಕಚ್ಚಿದ್ದಾಳೆ. ವಿಮಾನ ನಿಲ್ದಾಣದ ಉಪಾಹಾರ ಗೃಹದ ಮ್ಯಾನೇಜರ್ ಆಕೆಯನ್ನು ಹಿಡಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ, ಮಹಿಳೆ ತಾನು ಶುಕ್ರ ದೇವತೆ ಎಂದು ಚೀರಾಡುತ್ತಾ ಕಚ್ಚಿದ್ದಾಳೆ.

ನಂತರ ಆಕೆ ವಿಮಾನ ನಿಲ್ದಾಣದಲ್ಲಿನ ಮಾನಿಟರ್ ಒಡೆದುಹಾಕಿ ಅವಾಂತರ ಸೃಷ್ಟಿಸಿದ್ದಾಳೆ. ನಂತರ ಭದ್ರತಾ ಅಧಿಕಾರಿಗಳು ಅವಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್‌ ವಿಚಾರಣೆಯ ಸಮಯದಲ್ಲಿ, ಪಾಲ್ಮಾ ಮಾನಸಿಕವಾಗಿ ಕುಸಿದಿದ್ದ ನಾನು ಆ ದಿನ ಔಷಧಿಗಳನ್ನು ತೆಗೆದುಕೊಂಡಿಲ್ಲ ಹಾಗಾಗಿ ಆ ರೀತಿ ವರ್ತಿಸಿರುವುದಾಗಿ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿಬಿಸಿಸಿಐನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ..! ಯಾರೆಲ್ಲ ಅರ್ಜಿ ಸಲ್ಲಿಸಬಹುದು..? ಇಲ್ಲಿದೆ ಸಂಪೂರ್ಣ ಮಾಹಿತಿ

ಗರ್ಲ್ಸ್ ಹಾಸ್ಟೆಲ್‌ ನಲ್ಲಿ ಬೆಂಕಿ ಅವಘಡ..! ಕಟ್ಟಡದಿಂದ ಜಿಗಿದ ವಿದ್ಯಾರ್ಥಿನಿಯರು..! ವಿಡಿಯೋ ವೈರಲ್   

 

See also  ಬಾರ್ ಗಲಾಟೆಯಿಂದಾಗಿ ಪ್ರಾಣ ತೆತ್ತ ಯುವಕ..!ತನ್ನ ಮಗುವನ್ನು ಎದೆ ಮೇಲೆ ಮಲಗಿಸಿ ನಿದ್ರಿಸುತ್ತಿರುವಾಗ್ಲೇ ಹಂತಕರು ಮನೆಗೆ ನುಗ್ಗಿ ಮುಗಿಸಿಬಿಟ್ರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget