ಕ್ರೈಂದೇಶ-ವಿದೇಶಸಿನಿಮಾ

ಸಲ್ಮಾನ್‌ ಖಾನ್‌ ಗೆ ಜೀವ ಬೆದರಿಕೆ ಹಾಕಿ 5 ಕೋಟಿ ರೂ. ಬೇಡಿಕೆ ಇಟ್ಟಿದ್ದವ ಅರೆಸ್ಟ್..! ತರಕಾರಿ ಮಾರುತ್ತಿದ್ದ 24 ವರ್ಷದ ಆರೋಪಿ ಪೊಲೀಸರ ಬಲೆಗೆ..!

235

ನ್ಯೂಸ್ ನಾಟೌಟ್: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವಂತವಾಗಿ ಇರಬೇಕಾದರೆ ಮತ್ತು ಲಾರೆನ್ಸ್ ಬಿಷ್ಣೋಯಿ ಜೊತೆಗಿನ ಧೀರ್ಘ ವೈರತ್ವವನ್ನು ಕಳೆದುಕೊಳ್ಳಬೇಕಾದರೆ ರೂ.5 ಕೋಟಿ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದ ವ್ಯಕ್ತಿಯ ಮೊಬೈಲ್ ಸಂಖ್ಯೆಯಿಂದ ಮುಂಬೈ ಸಂಚಾರ ಪೊಲೀಸರಿಗೆ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ವಿಚಾರದಲ್ಲಿ ನಗರ ಸಂಚಾರ ನಿಯಂತ್ರಣ ಕೊಠಡಿಯ ವಾಟ್ಸಪ್ ಸಹಾಯವಾಣಿಗೆ ಕಳೆದ ವಾರ 5 ಕೋಟಿ ರೂಪಾಯಿಯ ಬೇಡಿಕೆಯ ಬೆದರಿಕೆ ಸಂದೇಶ ಬಂದಿತ್ತು. ಈಗ ಆರೋಪಿಯನ್ನು ಜಾರ್ಖಂಡ್‌ನ ಜೆಮ್‌ಶೆಡ್‌ಪುರ ಮೂಲದ ತರಕಾರಿ ಮಾರಾಟಗಾರ ಶೇಖ್‌ ಹುಸೇನ್‌ ಮೌಸಿನ್‌(24) ಎಂದು ಗುರುತಿಸಲಾಗಿದೆ ಮತ್ತು ಬಂಧಿಸಲಾಗಿದೆ.

ಬೆದರಿಕೆ ಸಂದೇಶ ಕಳುಹಿಸಿದ್ದ ಮೊಬೈಲ್‌ ಫೋನ್‌ ಸಂಖ್ಯೆಯಿಂದಲೇ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಸಲ್ಮಾನ್‌ ಖಾನ್‌ ಗೆ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನಿಂದ ಬೆದರಿಕೆ ಸಂದೇಶಗಳು ಬಂದಿದ್ದವು.

Click

https://newsnotout.com/2024/10/bigboss-kannada-radha-hiregowda-kannada-news-viral-task/
https://newsnotout.com/2024/10/lawyer-jagadeesh-in-another-program-kannada-news-colors/
https://newsnotout.com/2024/10/brain-dead-kannada-news-viral-news-opration-theatre-doctor/
https://newsnotout.com/2024/10/life-hole-kannada-news-kannamangala-milk-dairy-viral-news/
See also  Yuvarajkumar Divorce: ದೊಡ್ಮನೆಗೂ ತಟ್ಟಿದ ಡಿವೋರ್ಸ್‌ ಪಿಡುಗು..! ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ ಯುವರಾಜ್‌ ಕುಮಾರ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget