ದೇಶ-ವಿದೇಶವೈರಲ್ ನ್ಯೂಸ್

ಮಿಲಿಟರಿ ಕಾರ್ಯಾಚರಣೆಯ ವೇಳೆ ಯೋಧರನ್ನು ಅಪಹರಿಸಿದ ಉಗ್ರರು..! ಓರ್ವ ಯೋಧನ ಮೃತದೇಹ ಪತ್ತೆ..!

ನ್ಯೂಸ್ ನಾಟೌಟ್: ಉಗ್ರರು ಅಪಹರಿಸಿದ್ದ ಸೇನಾ ಯೋಧನ ಶವ ಪತ್ತೆಯಾಗಿದ್ದು, ದೇಹದಲ್ಲಿ ಗುಂಡಿನ ದಾಳಿಯ ಗುರುತುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಅನಂತ್‌ ನಾಗ್‌ ಜಿಲ್ಲೆಯಲ್ಲಿ ಬುಧವಾರ (ಅ.09) ಬೆಳಗ್ಗೆ ಈ ದೇಹ ಸಿಕ್ಕಿದೆ.

ಅಕ್ಟೋಬರ್‌ 8ರಂದು ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸೇನೆ ಭಯೋತ್ಪಾದಕರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅನಂತ್‌ ನಾಗ್‌ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಇಬ್ಬರು ಯೋಧರನ್ನು ಉಗ್ರರು ಅಪಹರಿಸಿದ್ದರು. ಆದರೆ ಇದರಲ್ಲಿ ಓರ್ವ ಯೋಧ ಎರಡು ಗುಂಡಿನ ದಾಳಿಯ ನಂತರವೂ ತಪ್ಪಿಸಿಕೊಂಡು ಬಂದಿರುವುದಾಗಿ ವರದಿ ತಿಳಿಸಿದೆ.

ಗಾಯಗೊಂಡ ಸೈನಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ಮೂಲಗಳು ತಿಳಿಸಿವೆ. ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಈ ಘಟನೆ ನಡೆದಿದೆ.

ಅಪಹರಣಕ್ಕೊಳಗಾದ ಯೋಧ ಹಿಲಾಲ್‌ ಅಹ್ಮದ್‌ ಭಟ್‌ ಮೃತದೇಹವನ್ನು ಅನಂತ್‌ ನಾಗ್‌ ನ ಪತ್ರಿಬಾಲ್‌ ಅರಣ್ಯಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Click

https://newsnotout.com/2024/10/drone-in-karavaa-kannada-news-suspence-3-km-above-d/
https://newsnotout.com/2024/10/kannada-news-britain-govt-nagaland-origin-bidding/
https://newsnotout.com/2024/10/renukaswami-kannada-news-photo-issue-comment-on-whats-app/
https://newsnotout.com/2024/10/ayudha-pooja-ksrtc-kannada-news-100-rs-sanctioed-per-bus/

Related posts

ಪ್ರತಿಷ್ಠಿತ ಬ್ಯಾಂಕ್ ನ ಕೆಲಸ ಬಿಟ್ಟು ಈಕೆ ಕಳ್ಳತನಕ್ಕೆ ಇಳಿದದ್ದೇಕೆ..? ಕಿಲಾಡಿ ಕಳ್ಳಿಯ ಖತರ್ನಾಕ್ ಸ್ಟೋರಿ ಇಲ್ಲಿದೆ

‘ಜಸ್ಟ್ ಅರ್ಥ ಮಾಡ್ಕೊಳ್ಳಿ ಪ್ಲೀಸ್’, ಬನ್ನಿ ನಮ್ಮ ಪವರ್ ಮ್ಯಾನ್ ಗಳಿಗೆ ಸಾಥ್ ಕೊಡೋಣ

ಬೆಂಗಳೂರಿನ ಮಹಿಳಾ ಟೆಕ್ಕಿಯಿಂದ ಆತ ‘ಲವ್ ಜಿಹಾದ್’ ಮಾಡಿರುವುದಾಗಿ ದೂರು! ಕಾಶ್ಮೀರಕ್ಕೆ ತೆರಳಿದ್ದೇಕೆ ಪೊಲೀಸರು?