Latestಕ್ರೈಂದೇಶ-ವಿದೇಶ

3 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಅಪಹರಿಸಲು ಯತ್ನಿಸಿದವನ ಮೇಲೆ ಗುಂಡಿನ ದಾಳಿ..! ಆರೋಪಿ ಎನ್ ಕೌಂಟರ್ ಗೆ ಬಲಿ..!

824

ನ್ಯೂಸ್ ನಾಟೌಟ್: 3 ವರ್ಷದ ಬಾಲಕಿಯನ್ನು ಅಪಹರಿಸಿ ಲಕ್ನೋದ ಅಲಂಬಾಗ್ ಮೆಟ್ರೋ ನಿಲ್ದಾಣದ ಬಳಿ ಸೇತುವೆಯ ಕೆಳಗೆ ಅತ್ಯಾಚಾರ ಎಸಗಿದ ಘಟನೆಯ ಕೆಲವೇ ಗಂಟೆಗಳಲ್ಲಿ ಶುಕ್ರವಾರ ನಸುಕಿನ ವೇಳೆ ಆರೋಪಿಯು ಲಕ್ನೋ ಪೊಲೀಸರ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದಾನೆ.

ಆರೋಪಿಯನ್ನು ದೀಪಕ್ ವರ್ಮಾ ಎಂದು ಗುರುತಿಸಲಾಗಿದ್ದು, ಈ ಮೊದಲು ಹಲವು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಆರೋಪ ಈತ ಎದುರಿಸುತ್ತಿದ್ದ. ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯನ್ನು ಪತ್ತೆ ಮಾಡಲಾಗಿದ್ದು, ಗುರುವಾರ ನಸುಕಿನ 3.30ರ ವೇಳೆಗೆ ಬಿಳಿಯ ಸ್ಕೂಟರ್ ನಲ್ಲಿ ಬಾಲಕಿಯ ಜತೆಗೆ ಪಲಾಯನ ಮಾಡುತ್ತಿದ್ದ ವೇಳೆ ಬಂಧಿಸಲಾಗಿತ್ತು.

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಪೊಲೀಸ್ ತಂಡಗಳನ್ನು ರಚಿಸಿ, ದೀಪಕ್ ನ ಬಂಧನಕ್ಕೆ ಪೂರಕ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವ ಪ್ರಕಟಣೆ ಮಾಡಲಾಗಿತ್ತು.

ಸ್ಕೂಟರ್ ರಿಜಿಸ್ಟ್ರೇಷನ್ ನಂಬರ್ ಮತ್ತು ಸುಳಿವನ್ನು ಆಧರಿಸಿ ಕಂಟೋನ್ಮೆಂಟ್ ಪ್ರದೇಶದ ದೇವಿಖೇಡಾದಲ್ಲಿ ದೀಪಕ್ ನನ್ನು ಅಡ್ಡಗಟ್ಟಲಾಯಿತು. ಆತನನ್ನು ಶರಣಾಗುವಂತೆ ಸೂಚಿಸಿದಾಗ, ಆತ ಪೊಲೀಸರ ಮೇಲೆ ಗುಂಡು ಹಾರಿಸಿದ. ಪ್ರತಿದಾಳಿಯಲ್ಲಿ ಆತ ತೀವ್ರವಾಗಿ ಗಾಯಗೊಂಡ ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಆ ವೇಳೆಗಾಗಲೇ ಆತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಗುಪ್ತಾಂಗಕ್ಕೆ ತೀವ್ರ ಗಾಯಗಳಾಗಿರುವ ಸಂತ್ರಸ್ತೆ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಲೋಕಬಂಧು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರ್ ​ಸಿಬಿ ವಿಜಯೋತ್ಸವದ ಅನಾಹುತಕ್ಕೆ 5 ಪೊಲೀಸರ ತಲೆದಂಡ..! ಅಧಿಕಾರಿಗಳ ಅಮಾನತ್ತಿಗೆ ಸರ್ಕಾರ ಕೊಟ್ಟ ಕಾರಣವೇನು..?

RCB ಇವೆಂಟ್ ಮ್ಯಾನೇಜ್‌ ಮೆಂಟ್‌ ಕಂಪನಿ ಮುಖ್ಯಸ್ಥ ನಾಪತ್ತೆ..! ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿ..!

See also  ಮಹಿಳೆಯರ ಒಳಉಡುಪು ಧರಿಸಿ ಮಾರುಕಟ್ಟೆಯಲ್ಲಿ ಯುವಕನ ಅಶ್ಲೀಲ ರೀಲ್ಸ್..!​ ಸ್ಥಳೀಯರಿಂದ ಧರ್ಮದೇಟು, ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget