ಕ್ರೈಂಸುಳ್ಯ

ಕನಕಮಜಲು: ಜೋರು ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗ್ಯಾಸ್ ಲಾರಿ, ರಸ್ತೆಯಲ್ಲೆಲ್ಲ ಸೋರಿಕೆಯಾದ ಗ್ಯಾಸ್, ವಾಹನ ಸಂಚಾರಕ್ಕೆ ಕೆಲಕಾಲ ಅಡೆತಡೆ

245

ನ್ಯೂಸ್ ನಾಟೌಟ್: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಇಂದು ಸಂಜೆ (ಜೂನ್10) ನಡೆದಿದೆ. ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಮಡಿಕೇರಿ ಕಡೆಯಿಂದ ಮಂಗಳೂರಿನತ್ತ ಲಾರಿ ಸಿಲಿಂಡರ್ ಹೊತ್ತು ಸಂಚರಿಸುತ್ತಿತ್ತು. ಜೋರಾಗಿ ಮಳೆ ಸುರಿಯುತ್ತಿದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

See also  ಸುಳ್ಯ:ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಂತಿಮ ವರ್ಷದ ಸ್ನಾತಕೋತ್ತರ ವಿಭಾಗದ ಫಲಿತಾಂಶ ಪ್ರಕಟ: ಶೇಕಡಾ 100 ಫಲಿತಾಂಶ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget