ಕ್ರೈಂದೇಶ-ವಿದೇಶವೈರಲ್ ನ್ಯೂಸ್

ರಾತ್ರಿ ಕಮಲಾ ಹ್ಯಾರಿಸ್ ಕಚೇರಿಯ ಮೇಲೆ ಗುಂಡಿನ ದಾಳಿ..! ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗೆ ಪ್ರಾಣ ಭಯ..!

233

ನ್ಯೂಸ್ ನಾಟೌಟ್ : ಅಮೆರಿಕ ಚುನಾವಣಾ ಕಣದ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್(Kamala Harris) ಚುನಾವಣ ಪ್ರಚಾರ ಕಚೇರಿಯ ಮೇಲೆ ನಿನ್ನೆ(ಸೆ.24) ಗುಂಡಿನ ದಾಳಿ ನಡೆಸಲಾಗಿದೆ.

ಅಮೆರಿಕದ ಟೆಂಪೆ ನಗರದಲ್ಲಿನ ಕಚೇರಿಯ ಮುಂಭಾಗದ ಕಿಟಕಿಗಳ ಮೇಲೆ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಲಾಗಿದೆ.
ಮಂಗಳವಾರ(ಸೆ24) ರಾತ್ರಿ ಘಟನೆ ಸಂಭವಿಸಿದೆ ಎಂದು ಟೆಂಪೆ ಪೊಲೀಸರು ದೃಢಪಡಿಸಿದ್ದಾರೆ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಕಚೇರಿ ಗುಂಡಿನ ದಾಳಿಯಿಂದ ಹಾನಿಯಾಗಿದೆ ಎಂದು ಹೇಳಿದ್ದು, ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಘಟನೆಯ ಸಮಯದಲ್ಲಿ ಕಚೇರಿ ಆವರಣದೊಳಗೆ ಯಾರೂ ಇರಲಿಲ್ಲ ಎಂದು ಟೆಂಪೆ ಪೋಲೀಸ್ ಸಾರ್ವಜನಿಕ ಮಾಹಿತಿ ಅಧಿಕಾರಿ ರಯಾನ್ ಕುಕ್ ಹೇಳಿದ್ದಾರೆ. ಕಟ್ಟಡದಲ್ಲಿ ಕೆಲಸ ಮಾಡುವವರ ಮತ್ತು ಹತ್ತಿರದವರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ” ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಎರಡು ಗುಂಡು ಬಾಗಿಲು ಮತ್ತು ಎರಡು ಕಿಟಕಿಗಳ ರಂಧ್ರಗಳಲ್ಲಿ ಸಿಕ್ಕಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ.

Click

https://newsnotout.com/2024/09/bike-royal-enfield-kannada-news-viral-news-fire-issue-cigarate/
https://newsnotout.com/2024/09/fir-kannada-news-statement-kananda-news-ganesha-chaturti-issue/
https://newsnotout.com/2024/09/swamiji-rayachuru-kannada-news-satlement-allegation-viral-news/
See also  ಬೆಳ್ಳಾರೆ: ಮಸೀದಿಯಲ್ಲಿ ಎರಡೂ ತಂಡಗಳ ನಡುವೆ ಹೊಡೆದಾಟ, ಆಸ್ಪತ್ರೆಗೆ ದಾಖಲು
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget