ಕರಾವಳಿ

ಕಲ್ಲುಗುಂಡಿ: ಪುಟ್ಟ ಮಗುವಿನ ಜೀವ ಉಳಿಸೋಕೆ ಕ್ರಿಕೆಟ್ ಪಂದ್ಯದಲ್ಲಿ ಗೆದ್ದ ಹಣವನ್ನೇ ನೀಡಿದ ಯುವಕರು..! ಯಶಸ್ವಿ ಯುವಕ ಮಂಡಲ ಹುಡುಗರ ಕಾರ್ಯಕ್ಕೆ ಮೆಚ್ಚುಗೆ

ನ್ಯೂಸ್ ನಾಟೌಟ್ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನಾಲ್ಕು ವರ್ಷದ ಮಗುವಿನ ಚಿಕಿತ್ಸೆಗಾಗಿ ಕಲ್ಲುಗುಂಡಿಯ ಯಶಸ್ವಿ ಯುವಕ ಮಂಡಲ ಯುವಕರ ತಂಡ ತಾವು ಕ್ರಿಕೆಟ್‌ ಕೂಟದಲ್ಲಿ ಗೆದ್ದ ಹಣವನ್ನೇ ಮಗುವಿನ ಚಿಕಿತ್ಸೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ತಮ್ಮ ಕೈನಿಂದ ಆದ ಸಹಾಯ ಮಾಡಿ ಒಂದು ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಚೆಂಬು ಗ್ರಾಮದ ಆನ್ಯಾಳ ಮೂಲದ ಎಸ್ ಅಜಿತ್ ಹಾಗೂ ಅನುಪಮಾ ದಂಪತಿಗಳ ನಾಲ್ಕು ವರ್ಷದ ಪುಟ್ಟ ಮಗು ಆರ್ವಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಬಡ ಕುಟುಂಬದ ನೆರವಿಗೆ ಅನೇಕರು ತಮ್ಮ ಕೈನಿಂದ ಆದ ಸಹಾಯವನ್ನು ಮಾಡಿದ್ದಾರೆ. ಅಂತೆಯೇ ಯಶಸ್ವಿ ಯುವಕ ತಂಡ ಕ್ರಿಕೆಟ್‌ ಕೂಟವೊಂದರಲ್ಲಿ ತಾವು ಗೆದ್ದ ಹಣದ ಮೊತ್ತವನ್ನು ಈ ಬಡ ಕುಟುಂಬಕ್ಕೆ ಹಸ್ತಾಂತರಿಸಿತು.

Related posts

ಅಮರ್ ಅಲ್ಲಾ ಮಸೀದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಕುತೂಹಲ ಮೂಡಿಸಿದ ಮೋದಿ ಪ್ರವಾಸ

ದೈವಗಳ ಹರಕೆಕೋಲ ನೆರವೇರಿಸಿದ ಸ್ಪೀಕರ್‌ ಯುಟಿ ಖಾದರ್‌ಗೆ ಮುಸ್ಲಿಂ ಧಾರ್ಮಿಕ ಮುಖಂಡನ ಆಕ್ಷೇಪ,‘ಯಾರೋ ಒಬ್ಬ ಗೀಚಿದ್ರೆ , ನೂರು ಜನ ಒಪ್ಪಿಕೊಳ್ಳಲ್ಲ ನರಕಕ್ಕೆ ಹೋಗಲಿ’ ಖಾದರ್ ತಿರುಗೇಟು

ಬಿಜೆಪಿ ಕಾರ್ಪೊರೇಟರ್ ಪತಿಯ ಹತ್ಯೆ ಯತ್ನ ಆರೋಪ: ‘ರಘುವಣ್ಣನ ಜತೆ ನಾವಿದ್ದೇವೆ’ ಪೋಸ್ಟ್ ವೈರಲ್