ಕರಾವಳಿ

ಕಲ್ಲುಗುಂಡಿಯ ಯು.ಬಿ. ಚಕ್ರಪಾಣಿ ದಂಪತಿಗೆ ಅಂಡಮಾನ್ -ನಿಕೋಬಾರ್ ಪ್ರವಾಸ ಭಾಗ್ಯ, ಆ ಒಂದು ಕೆಲಸದಿಂದ ಒಲಿದು ಬಂದ ಸುವರ್ಣಾವಕಾಶ

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ ನಿಷ್ಠೆ, ಪ್ರಮಾಣಿಕತೆಯಿಂದ ಕೆಲಸ ಮಾಡಿದ್ರೆ ಆತನನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ ಅನ್ನುವ ಮಾತು ನಿಜವಾಗಿದೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ವರ್ತಕರ ಸಂಘದ ಅಧ್ಯಕ್ಷ ಹಾಗೂ ಕಲ್ಲುಗುಂಡಿ ನವಮಿ ಸ್ಟೋರ್ ಮಾಲೀಕ ಯು.ಬಿ ಚಕ್ರಪಾಣಿ-ಕುಸುಮ ದಂಪತಿ ಅಲ್ಟ್ರಾಟಕ್ ಸಿಮೆಂಟ್ ಕಂಪನಿ ವತಿಯಿಂದ ಮಾ.20ರಿಂದ 24ರವರೆಗೆ ಅಂಡಮಾನ್ – ನಿಕೋಬಾರ್ ದ್ವೀಪಗಳ ಪ್ರವಾಸ ಮಾಡಲಿದ್ದಾರೆ.

ಅಲ್ಟ್ರಾಟಕ್ ಸಿಮೆಂಟ್ ಕಂಪನಿಯ ವಿತರಕರಾಗಿರುವ ಯು.ಬಿ. ಚಕ್ರಪಾಣಿ ಗ್ರಾಮದಲ್ಲಿ ಅತ್ಯುತ್ತಮ ವಿತರಕರಾಗಿ ಕೆಲಸ ಮಾಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸಂಪಾಜೆ ಭಾಗದಲ್ಲಿ ನವಮಿ ಸ್ಟೋರ್ ದಿನಸಿ ಅಂಗಡಿ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಯು.ಬಿ ಚಕ್ರಪಾಣಿ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದೇವರಾಗಿದ್ದಾರೆ. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ಯು.ಬಿ ಚಕ್ರಪಾಣಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಸಂಪಾಜೆ, ಕೊಡಗು ಸಂಪಾಜೆ, ಚೆಂಬು ಗ್ರಾಮ, ಗೂನಡ್ಕ ಸೇರಿದಂತೆ ಹಲವಾರು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

Related posts

ಸುಬ್ರಹ್ಮಣ್ಯ: ವಿದ್ಯುತ್‌ ದುರಸ್ಥಿ ವೇಳೆ ಶಾಕ್ ತಗುಲಿ ಕೊನೆಯುಸಿರೆಳೆದ ಲೈನ್ ಮ್ಯಾನ್..!ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಭೇಟಿ-ಪರಿಶೀಲನೆ

ಡಿ.16ರಂದು ‘ಅಂಕತ್ತಡ್ಕದ ಅಜ್ಜಗ್ ಭಕ್ತಿದರಿಕೆ’ ತುಳುಭಕ್ತಿಗೀತೆ ಬಿಡುಗಡೆ

ಏ.30ರಂದು ಸುಳ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮನ