ಕರಾವಳಿಕ್ರೈಂಸುಳ್ಯ

ಕಲ್ಲುಗುಂಡಿ: ಸೇತುವೆ ಅಡಿಯಲ್ಲಿ ಅಕ್ರಮ ಮರಳುಗಾರಿಕೆ, ಸಾರ್ವಜನಿಕರಿಂದ ದೂರು, ಬೆಂಡೆತ್ತಿ ಬ್ರೇಕ್ ಹಾಕಿದ ಅರಣ್ಯ ಇಲಾಖೆ

255
Representative image

ನ್ಯೂಸ್ ನಾಟೌಟ್: ಅಕ್ರಮವಾಗಿ ಮರಳುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಊರಿನವರು ಸ್ವಯಂ ಪ್ರೇರಿತರಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಮರಳುಗಾರಿಕೆಗೆ ಬ್ರೇಕ್ ಹಾಕಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯಿಂದ ವರದಿಯಾಗಿದೆ.

ಅನುಮತಿ ಪಡೆಯದೆ ಮರಳುಗಾರಿಕೆ ನಡೆಸುವುದು ಕಾನೂನು ಪ್ರಕಾರ ಅಪರಾಧ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಆಗಾಗ್ಗೆ ವರದಿಯಾಗುತ್ತಿದೆ. ಅಂತೆಯೇ ಕಲ್ಲುಗುಂಡಿಯ ಕೂಲಿಶೆಡ್ ಸಮೀಪದ ಬಾಲೆಂಬಿ ರಸ್ತೆಯಲ್ಲಿರುವ ಸೇತುವೆಯ ಅಡಿಯಿಂದ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರು.

ಸಾರ್ವಜನಿಕರು ಇದರ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ ಸೇತುವೆಗೆ ಹಾನಿಯಾಗಬಹುದು, ಜನಜೀವನಕ್ಕೆ ತೊಂದರೆ ಆಗಬಹುದು ಎಂದು ಉಲ್ಲೇಖಿಸಲಾಗಿತ್ತು. ಈ ಪ್ರಕಾರವಾಗಿ ದೂರನ್ನು ತೆಗೆದುಕೊಂಡ ಅರಣ್ಯ ಇಲಾಖೆ ಆ ಸ್ಥಳದಲ್ಲಿ ಮರಳುಗಾರಿಕೆ ನಡೆಸದಂತೆ ಇದೀಗ ಕ್ರಮ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

See also  ಸುಳ್ಯ: ಕೃಷಿ ಇಲಾಖೆಯಲ್ಲಿ 75 ನೇ ವರ್ಷದ ಗಣರಾಜ್ಯೋತ್ಸವ ಆಚರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget