ಕರಾವಳಿ

ಕಲ್ಲುಗುಂಡಿ ಸಂಪತ್ ಕುಮಾರ್ ಕೊಲೆ ಪ್ರಕರಣ : ಒಂದನೇ ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು

188

ನ್ಯೂಸ್‌ ನಾಟೌಟ್‌ : ಸಂಪಾಜೆಯ ಬಿಜೆಪಿ ಪ್ರಭಾವಿ ಮುಖಂಡ ಬಾಲಚಂದ್ರ ಕಳಗಿ ಅವರ ಕೊಲೆ ಪ್ರಕರಣದ ಆರೋಪಿ ಕಲ್ಲುಗುಂಡಿ ನಿವಾಸಿ ಸಂಪತ್‌ ಕುಮಾರ್ ಕೊಲೆ ಪ್ರಕರಣದ ಒಂದನೇ ಆರೋಪಿಗೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.

2020ರ ಅಕ್ಟೋಬರ್ 8ರಂದು ಸುಳ್ಯ ಶಾಂತಿನಗರದ ಬಾಡಿಗೆ ಮನೆಯಲ್ಲಿದ್ದ ಕಲ್ಲುಗುಂಡಿಯ ಸಂಪತ್ ಎಂಬವರನ್ನು 8 ಮಂದಿಯ ತಂಡ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿತ್ತು.ಆ ಎಲ್ಲ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದರು.

ಒಂದನೇ ಆರೋಪಿಯಾಗಿರುವ ಮನೋಹರ್ ಕೆ.ಎಸ್. ಯಾನೆ ಮನು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪುತ್ತೂರು ಇಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ, ಬಿಡುಗಡೆಗೆ ಆದೇಶ ಮಾಡಿರುವುದಾಗಿ ತಿಳಿದುಬಂದಿದೆ. ಆರೋಪಿಯ ಪರವಾಗಿ ವಕೀಲರಾದ ವಿಕ್ರಮ್ ಹೆಗ್ಡೆ ಮಂಗಳೂರು ಮತ್ತು ಎಸ್.ಕೆ. ವಿನಯ್ ಸೋಣಂಗೇರಿ ವಾದಿಸಿದ್ದಾರೆ.

See also  ಕಲ್ಲುಗುಂಡಿಯ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ವಿದ್ಯಾರ್ಥಿಗಳು ಮೆಚ್ಚಿದ ಶಿಕ್ಷಕಿ ಇನ್ನಿಲ್ಲ, ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಯಶೋಧ ಟೀಚರ್ ನಿಧನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget