ಕರಾವಳಿ

ಕಲ್ಲುಗುಂಡಿ: ಅನಾರೋಗ್ಯದಿಂದ ವ್ಯಕ್ತಿ ಹಠಾತ್ ಸಾವು, ಮಂಗಳೂರಿನಲ್ಲಿ ಅಸುನೀಗಿದ ನಂದನ ಫ್ಯಾನ್ಸಿ ಮಾಲೀಕ

278

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಹಠಾತ್ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಿಂದ ವರದಿಯಾಗಿದೆ.

ಮೃತರನ್ನು ಕೇರಳದ ಮೂಲದ ಕಲ್ಲುಗುಂಡಿಯ ನಿವಾಸಿ ರವಿ (ಕಣ್ಣನ್) ಎಂದು ಗುರುತಿಸಲಾಗಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಇತ್ತೀಚಿಗೆ ಅವರ ಆರೋಗ್ಯದಲ್ಲಿ ಭಾರಿ ಏರು ಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಕೇರಳ ನಿವಾಸಿಯಾಗಿದ್ದ ಇವರು ಕಳೆದ ಮೂರು ದಶಕದಿಂದ ಕಲ್ಲುಗುಂಡಿಯ ಕವಿತಾ ವೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮೃತದೇಹವನ್ನು ಕೇರಳಕ್ಕೆ ಕೊಂಡೊಂಯ್ಯಲಾಗಿದೆ ಎಂದು ತಿಳಿದುಬಂದಿದೆ. ಅವರ ಪತ್ನಿ ಕಲ್ಲುಗುಂಡಿಯ ನಂದನ ಫ್ಯಾನ್ಸಿಯನ್ನು ನಡೆಸುತ್ತಿದ್ದಾರೆ.

See also  ಪಶ್ಚಿಮ ಘಟ್ಟದ ಪರಿಸರ ಮತ್ತು ಪ್ರಕೃತಿ ಸಂರಕ್ಷಣೆ ಅಗತ್ಯ: ಯದುವೀರ ಒಡೆಯರ್‌
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget