ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯ ಕಡಪಾಲದ ಬಳಿ ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತ್ಯಕ್ಷಗೊಂಡಿದೆ.
ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಒಂಟಿ ಆನೆ ಕಾಣಿಸಿಕೊಂಡ ಬಳಿಕ ಇದೀಗ ಮತ್ತೊಮ್ಮೆ ಒಂಟಿ ಆನೆ ಸಂಚಾರವಾಗಿರುವುದು ಜನರಲ್ಲಿ ಒಂದು ರೀತಿಯ ಆತಂಕ ಮನೆ ಮಾಡುವಂತೆ ಮಾಡಿಬಿಟ್ಟಿದೆ. ಒಂಟಿ ಆನೆಯನ್ನು ಹೆದ್ದಾರಿಯಲ್ಲಿ ಕಂಡ ಬಳಿಕ ವಾಹನ ಸವಾರರು ಕೆಲ ಹೊತ್ತು ಕಾದು ಬಳಿಕ ಪ್ರಯಾಣ ಮುಂದುವರಿಸಿದರು.