ಕಲ್ಲುಗುಂಡಿ : ಇತ್ತೀಚೆಗೆ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಕಲ್ಲುಗುಂಡಿ ಮದ್ರಸದ ಮಕ್ಕಳು ಶೇ.100 ಫಲಿತಾಂಶದೊಂದಿಗೆ ಉತ್ತೀರ್ಣಗೊಂಡಿದ್ದಾರೆ.

ಮುನೀರ್ ಕೆ.ಎಂ ರವರ ಪುತ್ರಿ ನಿಹಾ ಫಾತಿಮಾ ಡಿಸ್ಟಿಂಕ್ಷನ್ನೊಂದಿಗೆ ತೇರ್ಗಡೆಯಾಗಿದ್ದು ಸುಳ್ಯ ರೇಂಜ್ ಹಾಗೂ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೂಸಾನ್ ಟರ್ಲಿ ರವರ ಪುತ್ರ ಮುಹಮ್ಮದ್ ಯಾಸೀನ್ ಡಿಸ್ಟಿಂಕ್ಷನ್ ನೊಂದಿಗೆ ತಾಲೂಕಿನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 5ನೇ ತರಗತಿಯ 13 ವಿದ್ಯಾರ್ಥಿಗಳು , 7ನೇ ತರಗತಿಯ 9 ವಿದ್ಯಾರ್ಥಿಗಳು ಹಾಗೂ 10ನೇ ತರಗತಿಯ 5 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಉತ್ತೀರ್ಣಗೊಂಡಿದ್ದಾರೆ.