ಸುಳ್ಯ

ಕಲ್ಲುಗುಂಡಿ: ಸೇತುವೆ ತಡೆಗೋಡೆಗೆ ರಿಫ್ಲೆಕ್ಟರ್ ಅಳವಡಿಕೆ 

ಕಲ್ಲುಗುಂಡಿ: ರಾತ್ರಿ ಹೊತ್ತಿನಲ್ಲಿ ಸಂಭವಿಸಬಹುದಾದ ರಸ್ತೆ ಅಪಘಾತ ತಪ್ಪಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ಕಲ್ಲುಗುಂಡಿ ಸೇತುವೆಯ ತಡೆಗೊಡೆಗೆ ರಿಫ್ಲೆಕ್ಟರ್ ಅಳವಡಿಸಲಾಗಿದೆ.

ಇತ್ತೀಚೆಗೆ ಇಲ್ಲಿ ಕಾರು ದುರಂತ ಸಂಭವಿಸಿದ್ದರಿಂದ ಜ್ಯೋತಿಷಿ ಸೇರಿದಂತೆ ಮೂವರಿಗೆ ಗಾಯವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಲಯನ್ಸ್ ಕ್ಲಬ್ ಸಂಪಾಜೆಯ ಪದಾಧಿಕಾರಿಗಳು ರಿಫ್ಲೆಕ್ಟರ್ ಅಳವಡಿಸಿ ಅಪಘಾತ ತಪ್ಪಿಸುವ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ತಡೆಗೋಡೆಯ ನಾಲ್ಕು ಬದಿಗೆ ರಿಪ್ಲೆಕ್ಟರ್ ಅಳವಡಿಸುವ ಸಂದರ್ಭದಲ್ಲಿ ಲಯನ್ ಕಿಶೋರ್ ಕುಮಾರ್ ಕೆ, ಲಯನ್ ಪ್ರಶಾಂತ್, ಲಯನ್ ಕಿಶೋರ್ ಪಿ.ಬಿ. ಉಪಸ್ಥಿತರಿದ್ದರು. ಗ್ಯಾರೇಜಿನ್ ಗಣೇಶ್, ರವಿ ಮತ್ತು  ಸುಜಿತ್ ಸಹಕರಿಸಿದರು.

Related posts

ಅರಂಬೂರು: ಬೈಕ್‌-ಜೀಪ್ ಅಪಘಾತ, ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ನೂತನ ಬ್ರಹ್ಮರಥದ ಭೂಸ್ಪರ್ಶ ಮಹೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ, ಕೆ.ಜಿ ಬೋಪಯ್ಯ , ಡಿ.ವಿ ಸದಾನಂದ ಗೌಡ, ರಮಾನಾಥ ರೈ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯರು ಭಾಗಿ

ಚೆಂಬು-ದಬ್ಬಡ್ಕ: ಆ್ಯಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ, ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರು..!