ಕರಾವಳಿ

ಕಲ್ಲುಗುಂಡಿ: ಹೆದ್ದಾರಿ ಮಧ್ಯೆ ಸೃಷ್ಟಿಯಾಗಿದ್ದ ಬೃಹತ್‌ ಹೊಂಡಗಳನ್ನು ಕಾಂಕ್ರೀಟ್ ಹಾಕಿ ದುರಸ್ತಿ ಮಾಡಿದ ಸ್ಥಳೀಯರು

217

ನ್ಯೂಸ್ ನಾಟೌಟ್ : ಕಳೆದ ಕೆಲವು ದಿನಗಳಿಂದ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿಯ ಸಮೀಪದ ಕೂಲಿಶೆಡ್‌ ಎಂಬಲ್ಲಿ ಹೆದ್ದಾರಿ ಮಧ್ಯೆ ಬೃಹತ್ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ಭಾರಿ ತೊಂದರೆಯಾಗಿತ್ತು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸ್ಥಳೀಯರು ಸೇರಿ ಕಾಂಕ್ರೀಟ್‌ ಹಾಕಿ ದುರಸ್ತಿ ಮಾಡಿದ್ದಾರೆ.

ಕಲ್ಲುಗುಂಡಿಯ ಕೂಲಿಶೆಡ್ಡ್ ನ ಕೆಳಗಿನ ಪೇಟೆಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಕೆಲವು ದಿನಗಳಿಂದ ಭಾರಿ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದವು. ಇದರಿಂದ ವೇಗದಿಂದ ಬರುವ ವಾಹನ ಚಾಲಕರು ಇದನ್ನು ಗಮನಿಸದೆ ಹೊಂಡಕ್ಕೆ ಬೀಳುತ್ತಿದ್ದರು. ಇದರಿಂದ ಅಪಘಾತ ಸೃಷ್ಟಿಯಾಗುತ್ತಿತ್ತು.

ಇದನ್ನು ಗಮನಿಸಿದ ಸ್ಥಳೀಯ ಭಾರತ್ ಪೈಂಟ್ಸ್ ಮಾಲೀಕ ಕಿಫಾಯತ್ತುಲ್ಲಾ , ರುದಾಲ್ಫ್ ಮಮ್ಮು‍ಞಿ ಸೋಡ, ರತೀಶ್ ಆಟೋ, ಸಂಜೀವ ಬಾಲೆಂಬಿ , ರಶೀದ್ , ಹಾರೀಸ್ ನೆಲ್ಲಿಕುಮೇರಿ ಮೊದಲಾದವರು ಸೇರಿ ಜಲ್ಲಿ , ಸಿಮೆಂಟ್ ಹಾಕಿ ಕಾಂಕ್ರೀಟ್ ಮಾಡಿ ಹೆದ್ದಾರಿ ಗುಂಡಿ ದುರಸ್ತಿ ಮಾಡಿದ್ದಾರೆ. ಸ್ಥಳೀಯರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

See also  ಬಂಟ್ವಾಳ: ಬೈಕಿಗೆ ಖಾಸಗಿ ಬಸ್ ಢಿಕ್ಕಿ, ಸವಾರ ಸ್ಥಳದಲ್ಲೇ ಸಾವು..! ಬಸ್ ಚಾಲಕ ಪರಾರಿ..!
  Ad Widget   Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget