ಸುಳ್ಯ

ಕಲ್ಲುಗುಂಡಿ: ಗಾಂಜಾ ಮತ್ತಿನಲ್ಲಿ ಯುವಕನ ಪುಂಡಾಟ..! ಎಲ್ಲೆ ಮೀರಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯ

219

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಗಾಂಜಾ ಸೇವನೆಯಂತಹ ಪ್ರಕರಣಗಳು ಹೆಚ್ಚುತ್ತಿದೆ. ಸರ್ಕಾರ ಸ್ಥಳೀಯಾಡಳಿತ ಎಷ್ಟೇ ಜಾಗೃತಿ ಮೂಡಿಸಿದರೂ ಇನ್ನೂ ಯುವಕರಲ್ಲಿ ಬದಲಾವಣೆ ಆಗದಿರುವುದು ವಿಪರ್ಯಾಸ. ಇಲ್ಲೊಬ್ಬ ಯುವಕ ಗಾಂಜಾ ಮತ್ತಿನಲ್ಲಿ ಯದ್ವಾತದ್ವಾ ದ್ವಿಚಕ್ರ ವಾಹನ ಓಡಿಸಿದ್ದಾನೆ. ಇದನ್ನು ಪ್ರಶ್ನಿಸಿದಾಗ ಪೆದಂಬು ಉತ್ತರ ನೀಡಿದ್ದಕ್ಕೆ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಕಲ್ಲುಗುಂಡಿಯಿಂದ ವರದಿಯಾಗಿದೆ. ನಂತರ ಈ ಪ್ರಕರಣ ಪೊಲೀಸ್ ಠಾಣೆವರೆಗೂ ತಲುಪಿದೆ. ಈ ವೇಳೆಯೂ ಯುವಕ ಗಾಂಜಾ ನಶೆಯಿಂದ ಕೆಳಕ್ಕಿಳಿಯದೆ ಇದ್ದ ಯುವಕ ಸಿಕ್ಕಸಿಕ್ಕವರಿಗೆಲ್ಲ ಮನಬಂದಂತೆ ಬೈದಿದ್ದಾನೆ. ಕೆಲವರ ಜಾತಿ ನಿಂದನೆಯನ್ನು ಕೂಡ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಇನ್ನಷ್ಟೆ ಪ್ರಕರಣ ದಾಖಲಾಗಬೇಕಿದೆ. ಕಳೆದ ಕೆಲವು ಸಮಯಗಳಿಂದ ಸಂಪಾಜೆ ಗ್ರಾಮದ ಸುತ್ತಮುತ್ತ ಯುವ ಜನತೆ ಮಾದಕ ವಸ್ತುಗಳಿಂದ ದಾರಿ ತಪ್ಪುತ್ತಿದ್ದಾರೆ ಎನ್ನುವ ಬಗ್ಗೆ ಗುಸುಗುಸು ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕಿದೆ.

See also  ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಸೆ. 21 ರಿಂದ ಸೆ. 30 ರವರೆಗೆ RDC-II ಮತ್ತು CATC ಶಿಬಿರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget