ಕರಾವಳಿ

ಕಲ್ಲುಗುಂಡಿಯಲ್ಲಿ ರೈನ್ ಕೋಟ್ ಕಳ್ಳನ ಕೈಚಳಕ..!

ನ್ಯೂಸ್ ನಾಟೌಟ್: ಕಳ್ಳನೊಬ್ಬ ಕಲ್ಲುಗುಂಡಿಯಲ್ಲಿ ರೈನ್ ಕೋಟ್ ಕದ್ದು ಪರಾರಿಯಾಗುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೀಸನ್ ಗೆ ತಕ್ಕಂತೆ ಕಳ್ಳತನ ಕಸುಬು ಮಾಡುತ್ತಿರುವ ಖತರ್ನಾಕ್ ಕಳ್ಳ ಕೆನರಾ ಬ್ಯಾಂಕಿನ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದಿಂದ ರೈನ್ ಕೋಟ್ ಕದ್ದು ಕಾಲಿಗೆ ಬುದ್ಧಿ ಹೇಳಿದ್ದಾನೆ.

ಮಳೆಗೆ ಧರಿಸುವ ಜಾಕೇಟನ್ನು ವಾಹನದ ಮೇಲೆ ಇರಿಸಿ ಗ್ರಾಹಕರೊಬ್ಬರು ಬ್ಯಾಂಕಿನ ಪ್ರವೇಶ ದ್ವಾರದ ಎಡ ಬದಿಗೆ ಇರುವ ಎಟಿಎಂಗೆ ಹೋಗಿದ್ದರು ಎನ್ನಲಾಗಿದೆ. ವ್ಯವಹಾರ ಮುಗಿಸಿ ಹೊರಬಂದು ನೋಡಿದಾಗ ಗ್ರಾಹಕರು ತಮ್ಮ ದ್ವಿಚಕ್ರ ವಾಹನದ ಮೇಲೆ ಇರಿಸಿ ಹೋಗಿದ್ದ ಜಾಕೆಟ್ ನಾಪತ್ತೆಯಾಗಿತ್ತು. ಕೂಡಲೇ ಅವರು ಬ್ಯಾಂಕಿಗೆ ತರಳಿ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆಗ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದ ಮೇಲೆ ಇರಿಸಿದ್ದ ಜಾಕೆಟ್ ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಒಂದು ವಾರ ಮೊದಲು ಸಾವಿರದ ಇನ್ನೂರು ರೂಪಾಯಿಗಳ ಬೆಲೆ ಇರುವ ಜೀಲ್ ಕಂಪನಿಯ ಜಾಕೆಟ್ ಅನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ.

Related posts

ಗ್ರಾಹಕರಿಗೊಂದು ಸಂತಸದ ಸುದ್ದಿ! , ಸುಳ್ಯದ ಗಾಂಧಿನಗರದಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್‌ನಲ್ಲಿ 3 ದಿನಗಳ ಮಾನ್ಸೂನ್ ಸ್ಪೆಷಲ್ ಡಿಸ್ಕೌಂಟ್ ಮೇಳ!

ದಕ್ಷಿಣ ಕನ್ನಡ, ಕೊಡಗು ಸೇರಿದಂತೆ 16 ಜಿಲ್ಲೆಗೆ ‘ಆರೆಂಜ್ ಅಲರ್ಟ್’

ವಿಜೃಂಭಿಸಿದ ಸುಳ್ಯ ತಾಲೂಕು ಮಟ್ಟದ 27ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿಗೆ ಕನ್ನಡ ಕಸ್ತೂರಿ ಪುರಸ್ಕಾರ