ಕಲ್ಲುಗುಂಡಿ: ಇಲ್ಲಿನ ಪೆಟ್ರೋಲ್ ಪಂಪ್ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಘಟನೆ ಇದೀಗ ಸಂಭವಿಸಿದೆ. ಘಟನೆಯಲ್ಲಿ ಎರಡೂ ಕಾರುಗಳು ಕೂಡ ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಒಂದು ಕಾರು ಕೊಯನಾಡಿನವರದ್ದು ಮತ್ತೊಂದು ಕಾರು ಗೋವಾ ರಿಜಿಸ್ಟ್ರೇಷನ್ ಹೊಂದಿರುವುದಾಗಿ ಹೇಳಲಾಗಿದೆ. ಪೆಟ್ರೋಲ್ ತುಂಬಿಸಿಕೊಂಡು ಮುಖ್ಯ ರಸ್ತೆಗೆ ಮರಳುತ್ತಿದ್ದ ಕೊಯನಾಡು ಮೂಲದ ವ್ಯಕ್ತಿಯ ಕಾರಿಗೆ ಗೋವಾ ರಿಜಿಸ್ಟ್ರೇಷನ್ ಕಾರು ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.